ಕೊಚ್ಚಿ ಹೋದ ಪೈಲಾರು – ನಾಯರ್ ಕಲ್ಲು ರಸ್ತೆಯಲ್ಲಿದ್ದ ಕೊಚ್ಚಡ್ಕ ಸೇತುವೆ

0

 

ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಅಮರಮುಡ್ನೂರು ಗ್ರಾಮದ ಪೈಲಾರು – ನಾಯರ್ಕಲ್ಲು ರಸ್ತೆಯಲ್ಲಿದ್ದ ಕೊಚ್ಚಡ್ಕ ಸೇತುವೆ ಕೊಚ್ಚಿ ಹೋಗಿದೆ. ಅದೇ ರೀತಿ ಕಂಜರ್ಪಣೆ ರಸ್ತೆಯಲ್ಲೂ ಆಗಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಸಂಜೆ 7 ಗಂಟೆ ಸುಮಾರಿಗೆ ಕೊಚ್ಚಡ್ಕ ಸೇತುವೆ ಕೊಚ್ಚಿ ಹೋಗಿರುವುದರಿಂದಾಗಿ ರಸ್ತೆ ಸಂಪರ್ಕ ತುಂಡರಿಸಲ್ಪಟ್ಟಿದ್ದು ರಸ್ತೆಯ ಆ ಬದಿಗೆ ಹೋಗಬೇಕಾದವರು ತಮ್ಮ ವಾಹನಗಳನ್ನು ಈಚೆ ಬದಿಯಲ್ಲಿರಿಸಿ ನಡೆದು ಹೋದರು.