ದೊಡ್ಡತೋಟ: ಕಾರು- ಬೈಕ್ ಅಪಘಾತ, ಬೈಕ್ ಸವಾರನಿಗೆ ಗಾಯ

0

ದೊಡ್ಡತೋಟ ಬಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.
ನೀರಬಿದಿರೆ ಕಡೆಯಿಂದ ಗುತ್ತಿಗಾರು ಕಡೆಗೆ ಹೋಗುವ ಕಾರಿಗೆ ದೊಡ್ಡತೋಟ ತಿರುವಿನಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಕಲ್ಲುಮುಟ್ಲು ನಿವಾಸಿ ಸವಿನ್ ಎಂಬ ಯುವಕ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.‌

ಪರಿಣಾಮ ಬೈಕ್ ಮತ್ತು ಕಾರು ಜಖಂಗೊಂಡಿದ್ದು ಬೈಕ್ ಸವಾರ ಸವಿನ್ ಗೆ ಕಾಲು ಮತ್ತು ಕೈಗಳಿಗೆ ಗಾಯವಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.