ಪತ್ರಕರ್ತ ಶರೀಫ್ ಜಟ್ಟಿಪಳ್ಳರಿಗೆ ಮೌನ ಸಾಧಕ ಪ್ರಶಸ್ತಿ

0

 

ಉದ್ಯಮಿ ಮಿಥುನ್‌ ಶೆಣೈರಿಗೆ ಯೂತ್ ಇನ್ ಸ್ಪಯರ್ ಅವಾರ್ಡ್‌

ಸೆ.9 ರಿಂದ 15 ರ ವರೆಗೆ ಜೇಸಿಐ ಸುಳ್ಯ ಸಿಟಿಯಿಂದ ಜೇಸಿಐ ಸಪ್ತಾಹ

 

ಜೇಸಿಐ ಸುಳ್ಯ ಸಿಟಿ ಆಶ್ರಯದಲ್ಲಿ ಜೇಸಿಐ ಸಪ್ತಾಹ ‘ನಮಸ್ತೆ’ ಸೆ.9 ರಿಂದ ಆರಂಭಗೊಂಡು ಸೆ.15 ರವರೆಗೆ ವಿವಿಧ ಕಾರ್ಯಕ್ರಮ ಗಳೊಂದಿಗೆ ಸುಳ್ಯದಲ್ಲಿ ನಡೆಯಲಿದೆ.

ಸೆ.9 ರಂದು ಸುಳ್ಯದ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಯಲ್ಲಿ ಉದ್ಘಾಟನಾ ಸಮಾರಂಭ ನಡೆಯುವುದು. ಸಮಾರಂಭದಲ್ಲಿ ಸುದ್ದಿ ಬಿಡುಗಡೆ ವರದಿಗಾರ ಶರೀಫ್ ಜಟ್ಟಿಪಳ್ಳ ರಿಗೆ ಮೌನಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಅಂದು ಮಹಿಳಾ ಕೌಶಲ್ಯ ತರಬೇತಿ ಕಾರ್ಯಕ್ರಮ ವೂ ನಡೆಯುವುದು.
ಸೆ.10 ರಿಂದ 14 ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೆ.15 ರಂದು ಪರಿವಾರಕಾನದ ಗ್ರಾಂಡ್ ಪರಿವಾರ ಸಭಾಂಗಣದಲ್ಲಿ ಸಮಾರೋಪ ನಡೆಯಲಿದ್ದು ಉದ್ಯಮಿ ಮಿಥುನ್ ಶೆಣೈಯವರಿಗೆ ಯೂತ್ ಇನ್ ಸ್ಪಯರ್ ಅವಾರ್ಡ್‌ ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.