ಉನ್ನತ ವ್ಯಾಸಂಗಕ್ಕೆ ಸ್ವಿಟ್ಜರ್ ಲ್ಯಾಂಡ್ ಗೆ ತೆರಳಲಿರುವ ಸಮರ್ಥ್ ಚೂಂತಾರ್

0
687

 

ಉನ್ನತ ವ್ಯಾಸಂಗಕ್ಕಾಗಿ ಸಮರ್ಥ್ ಚೂಂತಾರ್ ಸೆ. 11ರಂದು ಸ್ವಿಟ್ಜರ್ ಲ್ಯಾಂಡ್ ಗೆ ತೆರಳಲಿದ್ದಾರೆ.

ಗಣಿತ ಶಾಸ್ತ್ರದಲ್ಲಿ ಉನ್ನತ ಅಧ್ಯಯನಕ್ಕಾಗಿ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಸ್ವಿಜ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಜ್ಯೂರಿಕ್ ಯುನಿವರ್ಸಿಟಿ ಗೆ ತೆರಳಲಿದ್ದಾರೆ. ಮೆರಿಟ್ ಸೀಟು ಪಡೆದಿರುವ ಇವರು ಉಚಿತವಾಗಿ ಈ ಅರ್ಹತೆ ಪಡೆದಿದ್ದಾರೆ. ಎರಡು ವರ್ಷಗಳ ಕೋರ್ಸ್ ಇದಾಗಿದ್ದು ಭಾರತದಿಂದ ಆಯ್ಕೆಯಾದ ಬೆರಳೆಣಿಕೆಯ ವಿದ್ಯಾರ್ಥಿ ಗಳಲ್ಲಿ ಸಮರ್ಥ ಚೂಂತಾರು ಸೇರಿರುತ್ತಾರೆ.
ದಂತ ವೈದ್ಯ ಡಾ ಮುರಳಿಮೋಹನ್ ಚೂಂತಾರು ಹಾಗೂ ಶ್ರೀಮತಿ ಡಾ ರಾಜಶ್ರೀ ಮೋಹನ್ ರವರ ಪುತ್ರರಾಗಿದ್ದು ಬೆಂಗಳೂರಿನ ಭಾರತೀಯ ಸಾಂಖ್ಯಿಕ ವಿದ್ಯಾಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here