ಕೊಡಿಯಾಲ: ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸಾಚರಣೆ

0

ಕೊಡಿಯಾಲದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಶ್ರೀದೇವಿ ಸ್ತ್ರೀಶಕ್ತಿ ಗೊಂಚಲು ಕೊಡಿಯಾಲ ಇದರ ಸಂಯುಕ್ತ ಆಶ್ರಯದಲ್ಲಿ ಕೊಡಿಯಾಲ ಗ್ರಾಮ ಪಂಚಾಯತ್ ಮಟ್ಟದ ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸಾಚರಣೆ ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿ ಕಾರ್ಯಕ್ರಮದ ಹೆಣ್ಣು ಮಗುವಿನ ಶಿಶು ಪ್ರದರ್ಶನ ಕಾರ್ಯಕ್ರಮವನ್ನು ಸೆ. 14ರಂದು ಹಮ್ಮಿಕೊಳ್ಳಲಾಯಿತು.

ಶ್ರೀದೇವಿ ಶ್ರೀ ಶಕ್ತಿ ಗೊಂಚಲು ಅಧ್ಯಕ್ಷೆ ಶ್ರೀಮತಿ ಹರಿಣಾಕ್ಷಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಯಿತು. ಕೊಡಿಯಾಲ ಗ್ರಾ.ಪಂ. ಸದಸ್ಯ ಕರುಣಾಕರ ಆಳ್ವ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳಾ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಸಾದ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮದ ಉದ್ದೇಶ ಮತ್ತು ಮಾಹಿತಿಯನ್ನು ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಾವತಿಯವರು ಸ್ವಸ್ಥ ಮಹಿಳೆ ಸಂಸಾರದ ಆಸ್ತಿ ಎಂಬುದರ ಮಹತ್ವವನ್ನು ತಿಳಿಸಿದರು.

ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಸಹನಾ ಪೌಷ್ಠಿಕ ಆಹಾರದ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು. ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಕಾರ್ಯಕ್ರಮದಿಂದ ಸ್ತ್ರೀ ಶಕ್ತಿ ಗುಂಪಿನ ಸದಸ್ಯರುಗಳಿಗೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿದರು. ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ರೇಷ್ಮಾ ಪೌಷ್ಠಿಕ ಆಹಾರ, ಆರೋಗ್ಯ ಮತ್ತು ಚುಚ್ಚುಮದ್ದಿನ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ವಿಜಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಮತಿ ಯಶೋಧ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಲಕ್ಷ್ಮೀ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಸ್ವಾಗತಿಸಿದರು. ಬಾಚೋಡಿ ಅಂಗನವಾಡಿ ಕಾರ್ಯಕರ್ತ ಶ್ರೀಮತಿ ಸುಂದರಿ
ವಂದಿಸಿದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರ ತಯಾರಿಸಿದ ಎಲ್ಲಾ ಮಹಿಳೆಯರಿಗೆ ಮತ್ತು ಶಿಶು ಪ್ರದರ್ಶನದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪ್ರೇಮ ಕುಡಾನುಕಟ್ಟೆ ಕಾರ್ಯಕ್ರಮಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here