ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಹಾಸಭೆ

0

 

384 ಕೋಟಿ ವ್ಯವಹಾರ, 64.38 ಲಕ್ಷ ಲ‍ಾಭಾಂಶ, ಶೇ.7.75ಡಿವಿಡೆಂಡ್

ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಹರಿಹರ ಪಲ್ಲತ್ತಡ್ಕ ಇದರ 2021 – 2022ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ.16ರಂದು ಶ್ರೀ ಹರಿಹರೇಶ್ವರ ಕಲಾಮಂದಿರ ದಲ್ಲಿ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಸಂಘವು 384 ಕೋಟಿ ವ್ಯವಹಾರ ಮಾಡಿದ್ದು, 64,38,000 ಲ‍ಾಭಾಂಶ ಪಡೆದಿರುತ್ತದೆ. ಇದರಲ್ಲಿ ಶೇ.7.3/4 ಡಿವಿಡೆಂಡ್ ಶೇರುಧಾರರಿಗೆ ಹಂಚಿಕೆ ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಂಘದ ಅಧ್ಯಕ್ಷರಾದ ಹರ್ಷಕುಮಾರ್ ಡಿ ಎಸ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಕಾರ್ಯಕ್ರಮದ ಮೊದಲಿಗೆ ಅಗಲಿದ ಮಾಜಿ ಅಧ್ಯಕ್ಷರು, ನಿರ್ದೇಶಕರು ಗಳಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷರಾದ ಶೇಖರ ಅಂಬೆಕಲ್ಲು, ನಿರ್ದೇಶಕರುಗಳಾದ ಮಣಿಕಂಠ ಕೊಳಗೆ, ವಿನುಪ್ ಮಲ್ಲಾರ, ತಾರಾನಾಥ ಮುಂಡಾಜೆ, ಗಿರೀಶ್ ಕಟ್ಟೆಮನೆ, ಶ್ರೀಮತಿ ವಿಜಯ ಕೂಜುಗೋಡು, ಶ್ರೀ ಮತಿ ವಿಜಯ ಕಜ್ಜೋಡಿ, ರಾಜೇಶ್ ಪರಮಲೆ, ಸುರೇಶ್ ಚಾಳೆಪ್ಪಾಡಿ, ಮೋನಪ್ಪ ಕೊಳಗೆ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಂತರಾಮ ಮಣಿಯಾನಮನೆ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಹೂವಪ್ಪ ಗೌಡ, ಕೊಲ್ಲಮೊಗ್ರ ಶಾಖ ವ್ಯವಸ್ಥಾಪಕ ಶೇಖರ ಬಟ್ಟೋಡಿ, ಅಂತರಿಕ ಲೆಕ್ಕ ಪರಿಶೋಧಕ ಜನಾರ್ದನ ಗುಂಡಿಹಿತ್ಲು ಉಪಸ್ಥಿತರಿದ್ದರು. ಚಂದ್ರಕಲಾಕಟ್ರಮನೆ ಪ್ರಾರ್ಥನೆ ನೆರವೇರಿಸಿದರು.


ಹರ್ಷಕುಮಾರ್ ದೇವಜನ ಸ್ವಾಗತಿಸಿ, ಶೇಖರ್ ಅಂಬೆಕಲ್ಲು ಸ್ವಾಗತಿಸಿದರು. ಹಿಮ್ಮತ್ ಕೆ ಸಿ, ಶ್ಯಾಮ ಸುಂದರ, ಕೆ ಪಿ ಗಿರಿಧರ್ ಗದಾದರ ಮಲ್ಲಾರ,ದಯಾನಂದ ಕಟ್ಟೆಮನೆ ಚರ್ಚೆಯಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಸಂಘದ ವ್ಯಾಪ್ತಿಯ ಗ್ರಾಮಗಳ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿ ಯು ವಿನಲ್ಲಿ 90% ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಟ್ಟ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನದ ಮನವಿಯಂತೆ ಅಭಿವೃದ್ಧಿಗೆ ರೂ.ಒಂದು ಲಕ್ಷ ನೆರವು ನೀಡುವ ಬಗ್ಗೆ ಸಭೆಯಲ್ಲಿ ನಿರ್ದರಿಸಲಾಯಿತು.

ವರದಿ: ಕುಶಾಲಪ್ಪ ಕಾಂತುಕುಮೇರಿ