ಬೆಳ್ಳಾರೆ ವಿಶ್ವಕರ್ಮ ಜಯಂತಿ ವಿಶ್ವಕರ್ಮ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ

0

 

 

ಸುಳ್ಯ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ 32ನೇ ವರ್ಷದ ಕನ್ಯಾ ಸಂಕ್ರಮಣದ ಶ್ರೀ ವಿಶ್ವಕರ್ಮ ಪೂಜೆ, ಮತ್ತು ಕರ್ನಾಟಕ ಸರಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಆಚತಣೆ ಸೆ. 17ರಂದು ಬೆಳ್ಳಾರೆಯ ಪನ್ನೆಯಲ್ಲಿರುವ ಶ್ರೀ ಗಾಯತ್ರಿ ವಿಶ್ವಕರ್ಮ ನಿವೇಶನದಲ್ಲಿ ನಡೆಯಿತು.

ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸವಿತಾ, ಬೆಳ್ಳಾರೆ ಕೆ.ಪಿ.ಎಸ್.ಸಿ ಮುಖ್ಯೋಪಾಧ್ಯಾಯರಾದ ಮಾಯಿಲಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿರಂಜನ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಶಿಲ್ಪಿ ಮಾಜಿ ಅಧ್ಯಕ್ಷ ಧನಂಜಯ ಆಚಾರ್ಯ ಯೇನೆಕಲ್ಲು, ಸುಳ್ಯ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಸೋಮಶೇಖರ ಆಚಾರ್ಯ, ಕಾರ್ಯದರ್ಶಿ ನಾರಾಯಣ ಎಂ.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಸುದೇವ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಮಾ ವಿ. ಆಚಾರ್ಯ ಪ್ರಾರ್ಥಿಸಿದರು. ಸಂಘದ ಮಾಜಿ ಅಧ್ಯಕ್ಷ ಈಶ್ವರ ಆಚಾರ್ಯ ಸ್ವಾಗತಿಸಿದರು. ಕೆ.ಹೆಚ್. ಮಧುಚಂದ್ರ ಆಚಾರ್ಯ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿಶ್ವಕರ್ಮ ಪೂಜೆ ನೆರವೇರಿಸಿದರು. ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.