ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಸಭೆ

0

 

ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಸಭೆಯು ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿ ಕೆವಿಜಿ ಸುಳ್ಯ ಹಬ್ಬ ಸಮಿತಿಯ ಕಚೇರಿಯಲ್ಲಿ ನಡೆಯಿತು. ಅಸೋಸಿಯೇಷನ್ ಅಧ್ಯಕ್ಷರಾದ ದೊಡ್ಡಣ್ಣ ಬರೆಮೇಲು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ನಡೆಯಲಿರುವ ಜೂನಿಯರ್ ವಾಲಿಬಾಲ್ ಚಾಂಪಿಯನ್ ಶಿಪ್ 2022 ಕ್ಕೆ 14 ವರ್ಷ 16 ವರ್ಷ ಮತ್ತು 18 ವರ್ಷ ವಯೋಮಿತಿಯೊಳಗಿನ ಬಾಲಕ ಬಾಲಕಿಯರಿಗಾಗಿ ನಡೆಯಲಿರುವ ಪಂದ್ಯಾಟಕ್ಕೆ ಸುಳ್ಯ ತಾಲೂಕಿನಿಂದ ತಂಡಗಳನ್ನು ಆಯ್ಕೆ ಮಾಡಲು ತಂಡಗಳ ಆಯ್ಕೆ ಪ್ರಕ್ರಿಯೆಯನ್ನು ಸೆಪ್ಟೆಂಬರ್ 24ರಂದು ಸುಳ್ಳದ ಸೈಂಟ್ ಬ್ರೆಜಿಡ್ಸ್ ಶಾಲೆಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಅಲ್ಲದೆ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಾಲಿಬಾಲ್ ತರಬೇತಿ ಕಾರ್ಯಗಾರವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

 

ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಲೆನಾಡು ಸಿರಿ ಪ್ರಶಸ್ತಿಗೆ ಭಾಜನರಾದ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನಿರ್ಣಾಯಕರುಗಳ ತಂಡದ ಸಂಚಾಲಕರಾದ ಕೊರಗಪ್ಪ ಬೆಳ್ಳಾರೆ ಹಾಗೂ ಮೌನಸಾಧಕ ಪ್ರಶಸ್ತಿಗೆ ಹಾಜನರಾದ ಶರೀಫ್ ಜಟ್ಟಿಪಳ್ಳ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಾಗೇಶ್ ಕುರುಂಜಿ ಯವರ ಮಗಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಪ್ರೋತ್ಸಾಹಧನ ನೀಡಲಾಯಿತು.

ಸಭೆಯಲ್ಲಿ ದ. ಕ ಜಿಲ್ಲಾ ವಾಲಿಬಾಲ್ ಅಶೋಸಿಯೇಶನ್ ಉಪಾಧ್ಯಕ್ಷ ಎಸ್ ಸಂಶುದ್ದೀನ್, ಅಸೋಸಿಯೇಷನ್ ಗೌರವ ಸಲಹೆಗಾರರ ಎನ್ ಎ ರಾಮಚಂದ್ರ ಶಿವರಾಮ ಯೇನೆಕಲ್ಲು, ಎಸಿ ವಸಂತ ಹಾಗೂ ನಿರ್ದೇಶಕರುಗಳಾದ ಹರಿಪ್ರಕಾಶ್ ಅಡ್ಕಾರು, ಹರೀಶ್ ರೈ ಉಬರಡ್ಕ, ಕೆ ಗೋಕುಲ್ ದಾಸ್, ಮಂಜುನಾಥ ಎ ಯು, ನಿತಿನ್ ಜಿ ಆರ್, ಭವಾನಿಶಂಕರ್ ಕಲ್ಮಡ್ಕ ಕೊರಗಪ್ಪ ಬೆಳ್ಳಾರೆ,ಉಮೇಶ್ ಪಂಜದ ಬೈಲು, ಕೆ ಎಮ್ ಮುಸ್ತಫ, ಶರತ್ ಅಡ್ಕಾರ್, ಶಾಪಿ ಕುತ್ತಮೊಟ್ಟೆ, ಸುದರ್ಶ ಕೆ ಎಸ್, ಅಬ್ದುಲ್ ರಜಾಕ್, ಇರ್ಫಾನ್ ಅಹಮದ್, ಶಶಿಧರ ಎಂ ಜೆ, ಶಹೀದ್ ಪಾರೆ, ಕೆ ಬಿ ಇಬ್ರಾಹಿಂ, ಅಶ್ರಫ್ ಗುಂಡಿ ರಿಯಾಜ್ ಕಟ್ಟೆಕಾರ್ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು ಸ್ವಾಗತಿಸಿ ವಂದಿಸಿದರು.