ಗಾಂಧಿನಗರ ಕೆಪಿಎಸ್ : ಕಾಲೇಜು ವಿಭಾಗದಲ್ಲಿ ಪ್ರತಿಭಾ ದಿನ

0

 

ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಳ್ಯ ಗಾಂಧೀನಗರ ಕಾಲೇಜಿನಲ್ಲಿ ಪ್ರತಿಭಾ ದಿನ ಆಚರಣೆಯನ್ನು ಸೆ. 24ರಂದು ನಡೆಯಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕೆ.ಪಿ.ಎಸ್ ಕಾರ್ಯಧ್ಯಕ್ಷ ಪ್ರವೀಣ್ ನಾಯಕ್ ವಹಿಸಿದ್ದರು. ಕೆ.ಪಿ.ಎಸ್ ಪ್ರಾಂಶುಪಾಲ ಅಬ್ದುಲ್ ಸಮದ್, ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಮತ್ತು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ ಸದಾಶಿವ ಪ್ರೌಢಶಾಲೆಯ ವಿಭಾಗದ ಮುಖ್ಯ ಶಿಕ್ಷಕ ಅರುಣ್ ಕುಮಾರ್, ಪ್ರಾಥಮಿಕ ವಿಭಾಗ ದ ದೈಹಿಕ ಶಿಕ್ಷಣ ಶಿಕ್ಷಕಿ ಎ.ಜಿ ಭವಾನಿ, ಉಪನ್ಯಾಸಕಿ ರಶ್ಮಿ, ಆರೋಗ್ಯ ಇಲಾಖೆಯ ದಾದಿ ಕನಕಾಂಗಿ. ವೇದಿಕೆಯಲ್ಲಿದ್ದರು.

ಪ್ರಥಮ ವರ್ಷದ ಪಿ.ಯು.ಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.

 


ಗೌರವ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ರಶ್ಮಿ ಕಂದಡ್ಕ ಅವರನ್ನು ಶಾಲು ಹೊದಿಸಿ ಸನ್ಮಾನಿ ಸಲಾಯಿತು.

ಕಾಲೇಜು ವತಿಯಿಂದ ನೀಡಿದ ಗೌರವ ಧನವನ್ನು ಪುನಃ ಹಿಂತಿರುಗಿಸಿ ಕಾಲೇಜಿನ ಅಭಿವೃದ್ಧಿಗೆ ಎಂದು ತಿಳಿಸಿ ಪ್ರಾಂಶುಪಾಲರ ಕೈಗೆ ನೀಡಿ ಶುಭ ಹಾರೈಸಿದರು.

ಇತ್ತೀಚೆಗೆ ಕೊರೋನ ಸಮಯ ದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಏನೇ ಆರೋಗ್ಯ ಸಮಸ್ಯೆ ಬಂದರೂ ತಕ್ಷಣ ಬಂದು ಚಿಕಿತ್ಸೆ ನೀಡುವ ಆರೋಗ್ಯ ಇಲಾಖೆಯ ದಾದಿ ಕನಕಾಂಗಿ ಅವರನ್ನು ಸನ್ಮಾನ ಮಾಡಲಾಯಿತು.

 


ವಿಕಲಚೇತನೆ ವಿದ್ಯಾರ್ಥಿನಿ ಆಯಿಷತ್ ಫರ್ಜಾನ, ಉಪನ್ಯಾಸಕಿ ಪ್ರೇಮ , ವಿದ್ಯಾಶ್ರೀ ಮತ್ತು ಅತ್ಯಧಿಕ ಅಂಕ ಪಡೆದ ಫಾತಿಮತ್ ಝಯಿದರವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಸಮದ್ ಸ್ವಾಗತಿಸಿ, ಉಪನ್ಯಾಸಕಿ ಪ್ರೇಮ ಧನ್ಯವಾದವಿತ್ತರು. ಉಪನ್ಯಾಸಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ವಿಭಾಗದ ವಿದ್ಯಾರ್ಥಿಗಳು ಎಲ್ಲ ಉಪನ್ಯಾಸಕರು ಹಾಜರಿದ್ದರು.

LEAVE A REPLY

Please enter your comment!
Please enter your name here