ಸುಳ್ಯ ಪ್ರೆಸ್ ಕ್ಲಬ್ ನೂತನ ಕಟ್ಟಡದ ದಾರಂದ ಮುಹೂರ್ತ

0

 

ಸುಳ್ಯ ನಗರದ ಅಂಬಟಡ್ಕದಲ್ಲಿ ಪ್ರೆಸ್ ಕ್ಲಬ್ ವತಿಯಿಂದ ನಿರ್ಮಾಣವಾಗುತ್ತಿರುವ ಪತ್ರಕರ್ತರ ಸಮುದಾಯ ಭವನದ ನೆಲ ಮಹಡಿಯ ಕಾಮಗಾರಿ ಅಂತಿಮ ಹಂತದಲ್ಲಿದ್ದು ಕಟ್ಟಡದ ದಾರಂದ‌ ಮುಹೂರ್ತ ಗುರುವಾರ ನಡೆಯಿತು.‌ ಸುಂದರ ಆಚಾರ್ಯ ಹಳೆಗೇಟು ಅವರ ನೇತೃತ್ವದಲ್ಲಿ ದಾರಂದ ಮುಹೂರ್ತದ ಸಂದರ್ಭದಲ್ಲಿ ಉದ್ಯಮಿಗಳಾದ ಕೃಷ್ಣ ಕಾಮತ್, ಶ್ರೀಶ ಭಟ್ ಪಂಜ, ಉಪ ವಲಯಾರಣ್ಯಾಧಿಕಾರಿ ಸಂತೋಷ್ ಕುಮಾರ್ ರೈ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಮಾಜಿ ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಉದ್ಯಮಿ ಇಬ್ರಾಹಿಂ ಸೀಫುಡ್, ಹರಿರಾಯ ಕಾಮತ್, ಹೇಮಂತ್ ಕಾಮತ್ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗಿಸಿ ಶುಭಹಾರೈಸಿದರು.

ಪ್ರೆಸ್ ಕ್ಲಬ್ ಸುಳ್ಯ ಅಧ್ಯಕ್ಷ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರೆಸ್ ಕಟ್ಟಡದ ವಿವಿಧ ಹಂತಗಳ ವಿವರ ನೀಡಿದರು. ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ನಿರ್ದೇಶಕರಾದ ಜೆ.ಕೆ.ರೈ ವಂದಿಸಿದರು. ಮರದ ವ್ಯವಸ್ಥೆ ಮಾಡಿದ ದಾನಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು. ಕಟ್ಟಡದ ಗುತ್ತಿಗೆದಾರರಾದ ನೆಲ್ಸನ್ ಲಿಟ್ಲ್ ಫ್ಲವರ್, ಪ್ರೆಸ್ ಕ್ಲಬ್ ಉಪಾಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ನಿರ್ದೇಶಕರಾದ ಗಂಗಾಧರ ಮಟ್ಟಿ, ಜಯಪ್ರಕಾಶ್ ಕುಕ್ಕೆಟ್ಟಿ, ದುರ್ಗಾಕುಮಾರ್ ನಾಯರ್‌ಕೆರೆ, ಗಿರೀಶ್ ಅಡ್ಪಂಗಾಯ, ಕೃಷ್ಣ ಬೆಟ್ಟ, ಶಿವಪ್ರಸಾದ್ ಕೇರ್ಪಳ, ಈಶ್ವರ ವಾರಣಾಸಿ, ಶರೀಫ್ ಜಟ್ಟಿಪಳ್ಳ,
ಸುಳ್ಯ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ, ಪ್ರೆಸ್ ಕ್ಲಬ್ ಸದಸ್ಯರಾದ ಪದ್ಮನಾಭ ಮುಂಡೋಕಜೆ, ದಯಾನಂದ‌ ಕಲ್ನಾರ್, ಹಸೈನಾರ್ ಜಯನಗರ, ರಮೇಶ್ ನೀರಬಿದಿರೆ, ಗಣೇಶ್ ಮಾವಂಜಿ, ಗಣೇಶ್ ಕುಕ್ಕುದಡಿ, ಪದ್ಮನಾಭ ಅರಂಬೂರು, ಪ್ರಜ್ಞಾ ಎಸ್.ನಾರಾಯಣ್, ಪೂಜಾಶ್ರೀ ವಿತೇಶ್ ಕೋಡಿ, ಮಧು ಕೃಷ್ಣ ಉಪಸ್ಥಿತರಿದ್ದರು. ಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಭಾರತಿ ಬಂಟ್ವಾಳ್, ಜಿ.ಪಂ.ಇಂಜಿನಿಯರ್ ಮಣಿಕಂಠ ಮತ್ತು ಇತರರು ಉಪಸ್ಥಿತರಿದ್ದರು.

ಸುಳ್ಯ ಅಂಬೆಟಡ್ಕದಲ್ಲಿ ತಾಲೂಕು ಪಂಚಾಯತ್ ನೀಡಿದ ಸ್ಥಳದಲ್ಲಿ ಸುಮಾರು ಒಂದೂವರೆ ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರವ ಪ್ರೆಸ್ ಕ್ಲಬ್ ಕಟ್ಟಡದ‌ ನೆಲ ಮಹಡಿಯ ಕಾಮಗಾರಿ ಅಂತಿಮ ಹಂತದಲ್ಲಿದ್ದು ನವೆಂಬರ್ ತಿಂಗಳಲ್ಲಿ ಉದ್ಘಾಟನೆಯಾಗಲಿದೆ.

LEAVE A REPLY

Please enter your comment!
Please enter your name here