ಪ್ರತಿಭಟನಾ ಸ್ಥಳದಲ್ಲಿದ್ದ ಬಾರ್ ಮೆನೇಜರ್‌ಗೆ ದಿಗ್ಬಂಧನ

0

 

ಪೊಲೀಸ್ ಜೀಪೀನಲ್ಲಿ ಕುಳ್ಳಿರಿಸಿ ಕರೆದೊಯ್ದ ಪೊಲೀಸರು

ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ ಮಹಿಳೆಯರು

ಹರಿಹರದಲ್ಲಿ ಮದ್ಯ ಮುಕ್ತ ಹೋರಾಟ ಸಮಿತಿಯ ವತಿಯಿಂದ ಪ್ರತಿಭನಾ ಸಭೆ ನಡೆಯುತ್ತಿದ್ದ ವೇಳೆ ಅಲ್ಲಿಗೆ ಬಂದಿದ್ದ ಬಾರ್ ಮೆನೇಜರ್‌ರನ್ನು ಪ್ರತಿಭಟನಾಕಾರರು ಪ್ರಶ್ನಿಸಿದ ಹಾಗೂ ಈ ವೇಳೆ ಬಿಗುವಿನ ವಾತಾವರಣ ನಿರ್ಮಾಣವಾದ ಮತ್ತು ಅವರನ್ನು ಪೊಲೀಸ್ ರಕ್ಷಣೆಯಲ್ಲಿ ಕರೆದೊಯ್ದ ಘಟನೆ ನಡೆಯಿತು.

ಇಂದು ಮಧ್ಯಾಹ್ನ ಹರಿಹರದಿಂದ ಬಾಳುಗೋಡು ಕಡೆಗೆ ತಿರುಗುವಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಅದರ ಇನ್ನೊಂದು ಬದಿ ಹೋಟೆಲೊಂದರ ಎದುರು ನಾಗೇಶ್ ಎಂಬವರು ವಿಡಿಯೋ ಮಾಡುತ್ತಿದ್ದರೆಂದೂ, ಇದನ್ನು ಗಮನಿಸಿದ ಪ್ರತಿಭಟನೆಯಲ್ಲಿದ್ದ ಕೆಲವರು ವಿಡಿಯೋ ಮಾಡುತ್ತಿದ್ದವರು ಬಾರ್ ಮೆನೇಜರ್ ಎಂದು ತಿಳಿದು ಅವರನ್ನು ಪ್ರಶ್ನಿಸಿದರೆನ್ನಲಾಗಿದೆ. ಈ ಸಂದರ್ಭ ಮಾತಿನ ಚಕಮಕಿ ನಡೆಯಿತೆಂದೂ, ಆ ಸಂದರ್ಭ ಅಲ್ಲಿಗೆ ಪೋಲೀಸರು ಎಂಟ್ರಿ ಕೊಟ್ಟು ಅವರನ್ನು ಸಮಾಧಾನಿಸಿ ಕರೆದುಕೊಂಡು ಬರುತ್ತಿದ್ದಂತೆ ಪ್ರತಿಭಟನಾ ಕಾರರು ನಾಗೇಶ್ ಹಾಗೂ ಪೋಲಿಸರನ್ನು ಪ್ರಶ್ನಿಸತೊಡಗಿದರು. ಈ ಸಂದರ್ಭ ಮಾತಿನ ಚಕಮಕಿ ನಡೆಯುತ್ತಿದ್ದಾಗ ಪೋಲೀಸರೊಬ್ಬರು ನಾಗೇಶ್ ರನ್ನು ಕರೆದುಕೊಂಡು ಹೋಗಿ ಜೀಪಲ್ಲಿ ಕುಳ್ಳಿರಿಸಿ ಹೊರಟರು.

 

ಆಗ ಪ್ರತಿಭಟನಾರರು ಪೋಲೀಸ್ ಜೀಪನ್ನು ತಡೆದು ಅವರು ಯಾಕೆ ಬಂದಿರುವುದು ಎಂದು ಹೇಳಬೇಕು ಎಂದು ಒತ್ತಾಯಿಸಿದರೆಂದೂ, ಜೀಪು ಪ್ರತಿಭಟನಾಕರರನ್ನು ಭೇದಿಸಿ ಹೋದಾಗ ಅಲ್ಲಿದ್ದ ಮಹಿಳೆಯರು ರಸ್ತೆಯಲ್ಲಿ ಅಡ್ಡವಾಗಿ ಕುಳಿತು ನಾಗೇಶ್ ರವರು ಬಂದ ವಿಚಾರವನ್ನು ಹೇಳಬೇಕು ಎಂದು ಪಟ್ಟು ಹಿಡಿದ ಘಟನೆಯೂ ನಡೆಯಿತು. ಆದರೆ ಅದು ಫಲ ಕಾಣದೆ ಪೋಲೀಸ್ ಜೀಪು ಹೋದ ಮೇಲೆ ಪ್ರತಿಭಟನಾ ಸಭೆ ಮುಂದುವರಿಯಿತು.

 

LEAVE A REPLY

Please enter your comment!
Please enter your name here