ಸಂಪಾಜೆ, ಭಾರೀ ಗಾಳಿ – ಮಳೆ ,ಮರ ಬಿದ್ದು ಮನೆಗೆ ಹಾನಿ

0

ದ.ಕ ಸಂಪಾಜೆ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ, ಇಂದು ಸಂಜೆ ಸುರಿದ ಗಾಳಿ -ಮಳೆಗೆ ಮನೆ ಮೇಲೆ ಮರ ಬಿದ್ದು ಹಾಗೂ, ಕರೆಂಟ್ ಕಂಬಗಳಿಗೆ ಹಾನಿಯಾದ ಇಂದು ಮೇ 8 ರಂದು ವರದಿಯಾಗಿದೆ.

ದ.ಕ .ಸಂಪಾಜೆ ಗ್ರಾಮದ ದೊಡ್ಡಡ್ಕ ರಾಮಚಂದ್ರ ಮತ್ತು ಗೂನಡ್ಕ ಬೈಲೆ ಟೈಲರ್ ಅಬೀರ ನಾಗೇಶ್ ಅವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ. ಹಾಗೂ ಉಮ್ಮರ್ ನವರ ಅಂಗಡಿಗೆ ಮರದ ಕೊಂಬೆ ಬಿದ್ದು ಹಾನಿಯಾಗಿದೆ ಎಂದು ತಿಳಿದು ಬಂದಿದೆ.