ಆಲೆಟ್ಟಿ ಮುಖ್ಯ ರಸ್ತೆ ಬದಿ ತ್ಯಾಜ್ಯ ಎಸೆಯುವವರ ಮಾಹಿತಿ ನೀಡಿದಲ್ಲಿ ನಗದು ಬಹುಮಾನ ಘೋಷಣೆ- ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ನಿರ್ಧಾರ

0

 

 

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಬದಿ ನಿರಂತರವಾಗಿ ತ್ಯಾಜ್ಯಗಳನ್ನು ಎಸೆಯುತ್ತಿರುವ ವ್ಯಕ್ತಿಗಳ ಮತ್ತು ‌ವಾಹನದ ಬಗ್ಗೆ ಮಾಹಿತಿ ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ. ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಪಂಚಾಯತ್ ವತಿಯಿಂದ ಅಳವಡಿಸುವ ವ್ಯವಸ್ಥೆ ಮಾಡಲಾಗುತ್ತದೆ. ತ್ಯಾಜ್ಯ ಎಸೆಯುವ ವ್ಯಕ್ತಿಗಳ ಅಥವಾ ವಾಹನದ ಬಾವಚಿತ್ರ ಸಮೇತ ತಿಳಿಸಿದವರಿಗೆ ರೂ‌1000/- ನಗದು ಬಹುಮಾನ ನೀಡುವುದಾಗಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.