ಅಶ್ವಥ ಮರದ ಎಲೆಯಲ್ಲಿ ಶಾರದಾ ದೇವಿ ಚಿತ್ರ ರಚಿಸಿದ ಅದ್ಬುತ ಚಿತ್ರಕಲಾವಿದ

0

 

ದಸರಾ ಹಬ್ಬಕ್ಕೆ ಶುಭಾಶಯ ಕೋರಿದ ಶಶಿ ಅಡ್ಕಾರು

ಜಾಲ್ಸೂರು ಗ್ರಾಮದ ಅಡ್ಕಾರಿನ ನಿವೃತ್ತ ವನಪಾಲಕ ಶಿವರಾಮ ಬಲ್ಯಾಯ ಅವರ ಪುತ್ರ ಶಶಿ ಅಡ್ಕಾರು ಅವರು ವಿನೂತನ ರೀತಿಯಲ್ಲಿ ದಸರಾ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.
ಪ್ರತಿಯೊಂದು ಹಬ್ಬದ ದಿನಗಳಲ್ಲಿ, ರಾಜಕಾರಣಿಗಳು, ಚಲನಚಿತ್ರ ನಟ ನಟಿಯರ ಹುಟ್ಟುಹಬ್ಬದ ದಿನದಂದು ಶಶಿ ಅಡ್ಕಾರು ಅವರು ಎಲೆಯನ್ನು ಬಳಸಿ, ಅದನ್ನು ಕತ್ತರಿಸಿ, ಅದರಲ್ಲಿ ಚಿತ್ರ ರಚಿಸಿ, ತಮ್ಮ ಮನೆಯಂಗಳದಲ್ಲಿ ನಿಂತು ಎಲೆಯನ್ನು ಗಗನದೆತ್ತರಕ್ಕೆ ಹಿಡಿದು ಅದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.
ಇದೀಗ ಅಶ್ವಥ ಮರದ ಎಲೆಯನ್ನು ಬಳಸಿ ಅದರಲ್ಲಿ ತಾವರೆ ಹೂವಿನ ಮೇಲೆ ಕುಳಿತಿರುವ ಶಾರದಾ ದೇವಿಯ ಚಿತ್ರ ರಚಿಸಿ, ವಿಜಯದಶಮಿಯಂದು ದಸರಾ ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

LEAVE A REPLY

Please enter your comment!
Please enter your name here