ಸುಳ್ಯ‌ ಅಕ್ಷಯ್ ಆರ್ಕೇಡ್ ನಲ್ಲಿ ಸಾರಂಗ್ ಫ್ಯಾಷನ್ ವಸ್ತ್ರ ಮಳಿಗೆ ಶುಭಾರಂಭ

0

 

ಮಕ್ಕಳ‌ ಮತ್ತು ಮಹಿಳೆಯರ‌ ಸಿದ್ಧ ಉಡುಪುಗಳ ಅಪೂರ್ವ ಸಂಗ್ರಹ

ಶುಭಾರಂಭ ಪ್ರಯುಕ್ತ ದೀಪಾವಳಿ ಹಬ್ಬದವರೆಗೆ ಶೇ.10 ರಿಂದ ಶೇ.30 ರಿಯಾಯಿತಿ

 

ಸುಳ್ಯ ಚೆನ್ನಕೇಶವ ದೇವಸ್ಥಾದ ಸಮೀಪವಿರುವ ಅಕ್ಷಯ್ ಆರ್ಕೇಡ್ ನಲ್ಲಿ ಅಡ್ಪಂಗಾಯದ ಕಿಶನ್ ಮಾಲಕತ್ವದ ವಸ್ತ್ರ ಮಳಿಗೆ ಅ.5ರ ವಿಜಯದಶಮಿಯಂದು‌ ಶುಭಾರಂಭಗೊಂಡಿತು.

ಪದ್ಮಶ್ರೀ ಪುರಸ್ಕೃತ ಗಿರೀಶ್ ‌ಭಾರದ್ವಾಜರು ಸಂಸ್ಥೆಯನ್ನು ಉದ್ಘಾಟಿಸಿದರು. ‌ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಸುಳ್ಯ ಕೃಷ್ಣ ಸ್ಟೋರ್ಸ್ ವಸ್ತ್ರ ಮಳಿಗೆ ಮಾಲಕ ಎಂ.ಬಿ.ಸದಾಶಿವ, ಸುಳ್ಯ ರೋಟರಿ ‌ಕ್ಲಬ್ ಮಾಜಿ ಕಾರ್ಯದರ್ಶಿ ಶ್ರೀಮತಿ ಲತಾ ಮಧುಸೂದನ್, ಸುಳ್ಯ ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಶೀಲಾ ಅರುಣ್ ಕುರುಂಜಿ, ಸುಳ್ಯ ಇನ್ನರ್ ವೀಲ್ ‌ಕ್ಲಬ್ ಅಧ್ಯಕ್ಷೆ ಶ್ರೀಮತಿ ನಯನಾ ಹರಿಪ್ರಸಾದ್ ಬಾಳೆಕೋಡಿ, ಕಟ್ಟಡದ ಮಾಲಕ ಶಿವಪ್ರಸಾದ್ ಸೋಮಯಾಗಿ ಮುಖ್ಯ ಅತಿಥಿಗಳಾಗಿದ್ದರು.


ಸುಳ್ಯ ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಕಿಶನ್ ರವರ ತಾಯಿ ಶ್ರೀಮತಿ ಭಾಗೀರಥಿ ಅಡ್ಪಂಗಾಯ ಹಾಗೂ ಮನೆಯವರು, ಬಂಧುಗಳು, ಸ್ನೇಹಿತರು ಇದ್ದರು.

ಸಂಸ್ಥೆಯ ಮಾಲಕ ಕಿಶನ್ ಅಡ್ಪಂಗಾಯ ಅತಿಥಿಗಳನ್ನು ಬರಮಾಡಿಕೊಂಡರು ಶಿವಪ್ರಸಾದ್ ಕೇರ್ಪಳ ಕಾರ್ಯಕ್ರಮ ನಿರೂಪಿಸಿದರು.

ಅಪೂರ್ವ ಸಂಗ್ರಹ : ನೂತನವಾಗಿ ಆರಂಭಗೊಂಡಿರುವ ಸಂಸ್ಥೆಯಲ್ಲಿ ಮಕ್ಕಳ‌ ಹಾಗೂ ಮಹಿಳೆಯರ ಎಲ್ಲ ತರಹದ ಸಿದ್ಧ ಉಡುಪುಗಳು ಲಭ್ಯವಿದೆ ಹಾಗೂ ಶುಭಾರಂಭದ ಪ್ರಯುಕ್ತ ದೀಪಾವಳಿ ಹಬ್ಬದ ವರೆಗೆ ಶೇ.10 ರಿಂದ ಶೇ.30 ರಿಯಾಯಿತಿ ಇರುತ್ತದೆ ಎಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here