ಪೆರಾಜೆ : ಕಾರುಗಳ ಪರಸ್ಪರ ಡಿಕ್ಕಿ, ಜಖಂ

0


ಕಾರುಗಳೆರಡು ಪರಸ್ಪರ ಡಿಕ್ಕಿ ಹೊಡೆದು ಕಾರುಗಳು ಜಖಂಗೊಂಡ ಘಟನೆ ಪೆರಾಜೆಯ ದಾಸರಹಿತ್ಲು ಬಳಿ ಸಂಭವಿಸಿದೆ. ಮಡಿಕೇರಿಯಿಂದ ಕಾಸರಗೋಡಿಗೆ ಪ್ರಯಾಣಿಸುತ್ತಿದ್ದ ಕಾರು ಹಾಗೂ ಸುಳ್ಯದಿಂದ ಅರಂತೋಡು ಕಡೆಗೆ ಹೋಗುತ್ತಿದ್ದ ಕಾರು ಪೆರಾಜೆಯ ದಾರಸಹಿತ್ಲು ಬಳಿ ಪರಸ್ಪರ ಡಿಕ್ಕಿ ಹೊಡೆಯಿತು. ಪ್ರಯಾಣಿಕರಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಪ್ರಕರಣ ರಾಜಿಯಲ್ಲಿ ಇತ್ಯರ್ಥಗೊಂಡಿತೆಂದು ತಿಳಿದುಬಂದಿದೆ.