ಸಾಮಾಜಿಕ ಕಳಕಳಿ ಮೆರೆದ ಸೆಲ್ಕೋ ಸಂಸ್ಥೆ

0

 

17 ಶಾಲೆ, ಕೊಲ್ಲಮೊಗ್ರ ಆರೋಗ್ಯ ಇಲಾಖೆಗೆ ಸೇರಿದಂತೆ ಬಡ ಕುಟುಂಬಕ್ಕೆ ಸಹಾಯ

ಸೆಲ್ಕೋ ಸಂಸ್ಥೆ ತನ್ನ ಉದ್ಯಮದ ಜತೆಗೆ ಶಿಕ್ಷಣ, ಆರೋಗ್ಯ ,ಸ್ವ-ಉದ್ಯೋಗ, ಸಾಮಾಜಿಕ ಸೇವೆ ನೀಡುವ ಮೂಲಕ ಸಮಾಜಮುಖಿ ಹೆಜ್ಜೆ ಇರಿಸಿದೆ.

2000ನೇ ಇಸವಿಯ ಜನವರಿ 29 ರಂದು ಸೆಲ್ಕೋ ಸಂಸ್ಥೆಯ ಸುಳ್ಯ ಶಾಖೆಯು ಪ್ರಾರಂಭಗೊಂಡು ಗುಣಮಟ್ಟ ಉತ್ಪನ್ನ ಹಾಗೂ ಗ್ರಾಹಕರಿಗೆ ಉತ್ತಮ ಸರ್ವಿಸ್ ನೀಡಿ 22 ವರ್ಷಗಳನ್ನು ಪೂರೈಸಿದೆ. ಸುಮಾರು 7000 ಕ್ಕೂ ಮೇಲ್ಪಟ್ಟು ಸಂತುಷ್ಟ ಗ್ರಾಹಕರನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವಂಚಿತ ಬಡ ಕುಟುಂಬಗಳಿಗೆ ಸೋಲಾರ್ ದೀಪ ಅಳವಡಿಸಿ ಬೆಳಕು ನೀಡಿದೆ.

 

ಶಿಕ್ಷಣ ಕ್ಷೇತ್ರ : ಸರ್ಕಾರಿ ಶಾಲೆಯಲ್ಲಿ ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸ್ಮಾರ್ಟ್ ಕ್ಲಾಸ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಿದ್ದೇವೆ. ಈ ಯೋಜನೆಯಿಂದ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿದೆ. ಹಾಗೂ ಶಿಕ್ಷಕರು ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ತುಂಬಾ ಪ್ರಯೋಜನವಾಗಿದೆ. ಸಂಪೂರ್ಣ ಸೋಲರ್ ಆಧಾರಿತ ಸಿಸ್ಟಮ್ ಆಗಿರುವುದರಿಂದ ವಿದ್ಯುತ್ ನ ಅವಶ್ಯಕತೆ ಇರುವುದಿಲ್ಲ . ‘ನೆಕ್ಸ್ಟ್ ಎಜುಕೇಶನ್’ ಅವರ ತಂತ್ರಜ್ಞಾನ ಅಳವಡಿಕೆ ಮಾಡಲಾಗಿದೆ. ಐದು ವರ್ಷಗಳ ತಂತ್ರಜ್ಞಾನ ನಿರ್ವಹಣೆ ಮಾಡುತ್ತಾರೆ. ಈ ಯೋಜನೆಯ ವೆಚ್ಚ 1,80,000 ಆಗಿದ್ದು ಶೇಕಡ 50% ಸೆಲ್ಕೋ ಸಂಸ್ಥೆ ಹಾಗೂ ಶಾಲೆಯ ದಾನಿಗಳ ಮೂಲಕ ಯೋಜನೆ ರೂಪಿಸಲಾಗಿದೆ. ಸುಳ್ಯ ತಾಲೂಕಿನಾದ್ಯಂತ 17 ಸರ್ಕಾರಿ ಶಾಲೆಗಳಿಗೆ ಅಳವಡಿಕೆ ಮಾಡಲಾಗಿದೆ.

ಆರೋಗ್ಯ ಕ್ಷೇತ್ರ : ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೋಲರ್ ಅಳವಡಿಸಿ
ಆಸ್ಪತ್ರೆಗಳಲ್ಲಿ ರೋಗಿಗಳ ಉತ್ತಮ ಆರೈಕೆಗೆ ಸೋಲರ್ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಕೇಂದ್ರವು ಈಗ ಸಂಪೂರ್ಣ ಸೌರಶಕ್ತಿ ಬಲದೊಂದಿಗೆ ಕಾರ್ಯಚರಿಸುವಂತಾಗಿದೆ.‌ ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೆಲ್ಕೋ ಫೌಂಡೇಶನ್ ಮತ್ತು ವಿವಿಧ ಕಂಪೆನಿಗಳ ಸಿ.ಎಸ್.ಆರ್ ಅನುದಾನ ಮೂಲಕ 5 ಕಿಲೋ ವ್ಯಾಟ್ ಸಾಮರ್ಥ್ಯದ ಸೋಲರ್ ಅಳವಡಿಸಲಾಗಿದೆ. ಇದರಿಂದ ಆರೋಗ್ಯ ಕೇಂದ್ರಕ್ಕೆ ಅಗತ್ಯವಾಗಿ ಬೇಕಾದ ಕೋಲ್ಡ್ ಸ್ಟೋರೇಜ್ ,ಲ್ಯಾಬ್ ಉಪಕರಣ,ಹೆರಿಗೆ ಉಪಕರಣ,ಲೈಟ್,ಫ್ಯಾನ್, ಕಂಪ್ಯೂಟರ್, ನೆಟ್ ವರ್ಕ್ ತಂತ್ರಜ್ಞಾನಕ್ಕೆ ಸೌರಶಕ್ತಿ ಬಲ ಉಪಯೋಗವಾಗುತ್ತಿದೆ. ಈ ಯೋಜನೆಗೆ 4 ಲಕ್ಷದ ಮೂರು ಸಾವಿರ ರೂಪಾಯಿ ಆಗಿದ್ದು ಸೆಲ್ಕೋ ಸಂಸ್ಥೆಯಿಂದ 3 ಲಕ್ಷದ ಮೂರು ಸಾವಿರ ಆರೋಗ್ಯ ಕೇಂದ್ರಕ್ಕೆ ಸಹಕಾರ ನೀಡಲಾಗಿದ್ದು, 1 ಲಕ್ಷ ರೂಪಾಯಿ ಕೊಲ್ಲಮೊಗ್ರ ಗ್ರಾಮಸ್ಥರು ನೀಡಿ ಕೈಜೋಡಿಸಿದ್ದಾರೆ.

 

ಸ್ವ ಉದ್ಯೋಗ : ಗ್ರಾಮೀಣ ಭಾಗದಲ್ಲಿಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸೋಲರ್ ಆಧಾರಿತ ಉಪಕರಣಗಳಾದ ಟೈಲರಿಂಗ್ ಹೊಲಿಗೆ ಯಂತ್ರ , ಜೆರಾಕ್ಸ್ ಯಂತ್ರ, ಹಾಲು ಕರೆಯುವ ಯಂತ್ರ , ಮೀನು ಶೇಖರಣೆಗೆ ಸೋಲರ್ ಫ್ರಿಡ್ಜ್ , ಕೋಳಿ ಸಾಕಾಣಿಕೆ , ಮೀನು ಸಾಕಾಣಿಕೆ ಮೋಟಾರ್ ಯಂತ್ರ ,ಕುಲುಮೆ ಯಂತ್ರ ನೀಡಲಾಗಿದೆ. ಈ ಯೋಜನೆಗೆ ರಾಷ್ಟ್ರೀಕೃತ ಬ್ಯಾಂಕ್ ಮುಖಾಂತರ ಆರ್ಥಿಕ ಸಹಕಾರ ನೀಡಲಾಗಿದೆ ಹಾಗೂ ಶೇಕಡ 25% ಸೆಲ್ಕೋ ಸಂಸ್ಥೆ ಮೂಲಕ ಸಹಾಯಧನ ನೀಡಿದೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಸ್ವ-ಉದ್ಯೋಗಕ್ಕೆ ಸೌರ ಬಲ ಸಿಕ್ಕಿ ಪವರ್ ಕಟ್ ಸಮಸ್ಯೆ ಇಲ್ಲದಂತಾಗಿದೆ.

ಸಾಮಾಜಿಕ ಕ್ಷೇತ್ರ:
ಗ್ರಾಮ ಪಂಚಾಯತ್ ಅಮರಮುಡ್ನೂರು ಹಾಗೂ ಸೆಲ್ಕೋ ಸಂಸ್ಥೆಯ ಸಹಕಾರದೊಂದಿಗೆ ಪಂಚಾಯತ್ ವ್ಯಾಪ್ತಿಯ ಬಡ 10 ಅಂಗವಿಕಲ ಕುಟುಂಬಕ್ಕೆ ಸೋಲರ್ ದೀಪ ಅಳವಡಿಕೆ ಮಾಡಿದೆ . ಸೇವಾಭಾರತಿ ಕನ್ಯಾಡಿ ಹಾಗೂ ಸೆಲ್ಕೋ ಫೌಂಡೇಶನ್ ಸಹಕಾರದೊಂದಿಗೆ ಸುಳ್ಯ ತಾಲುಕಿನ ಬೆನ್ನುಮೂಳೆ ಮುರಿತಕ್ಕೊಳಗಾದ ಬಡ ಕುಟುಂಬಕ್ಕೆ ಸೋಲರ್ ಬೆಡ್ ಅಳವಡಿಕೆ ಹಾಗೂ ಸೋಲರ್ ದೀಪ ಅಳವಡಿಸಿದೆ. ಭಾರತೀಯ ವಿಕಸನ ಟ್ರಸ್ಟ್ ಮಣಿಪಾಲ ಅವರ ಸಹಕಾರದೊಂದಿಗೆ ಬೆಳ್ಳಾರೆ ಗ್ರಾಮದ ಉಪ್ಪಂಗಳ ಎಂಡೋಸಲ್ಫಾನ್ ಕಾಯಿಲೆಯಿಂದ ಬಳಲುತ್ತಿರುವ ರಿಯನ ಮನೆಗೆ ಸೋಲರ್ ದೀಪ ಅಳವಡಿಕೆ ,
ಕರ್ನಾಟಕ ಬ್ಯಾಂಕ್ ಶಿಕ್ಷಣಕ್ಕಾಗಿ ಬೆಳಕು ಯೋಜನೆಯಡಿ ಸರ್ಕಾರಿ ಶಾಲೆ ಕಲಿಯುತ್ತಿರುವ ವಿದ್ಯುತ್ ವ್ಯವಸ್ಥೆ ಇಲ್ಲದ ಬಡ 10 ಕುಟುಂಬಕ್ಕೆ ಸೋಲರ್ ದೀಪ ಅಳವಡಿಕೆ ಮಾಡಲಾಗಿದೆ. ಹೀಗೆ ತಾಲೂಕಿನ ಸಂಘ ಸಂಸ್ಥೆಯ ಸಹಕಾರದೊಂದಿಗೆ ಸೆಲ್ಕೋ ಸಂಸ್ಥೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಸೌರ ಉಪಕರಣ ನೀಡುವುದರ ಜೊತೆಗೆ ಇನ್ನು ಹೆಚ್ಚಿನ ಗ್ರಾಮೀಣ ಭಾಗಗಳಲ್ಲಿ ಸ್ವ ಉದ್ಯೋಗ ಹಾಗೂ ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಸಾಮಾಜಿಕ ಕೆಲಸಗಳನ್ನು ಮಾಡುವ ಗುರಿ ಹಾಕಿಕೊಂಡಿದೆ.