ಬೆಂಗಳೂರಲ್ಲಿ ನಡೆಯುವ ಚಲನಚಿತ್ರ ಶೂಟಿಂಗ್ ನಲ್ಲಿ  ಸುಳ್ಯದ ಕಲಾವಿದರು ಭಾಗಿ

0

ಬೆಂಗಳೂರಿನ ದೃಷ್ಟಿ ಮೀಡಿಯಾ ನಿರ್ಮಾಣದ ಸುಳ್ಯದ ಹೆಮ್ಮೆಯ ನಿರ್ದೇಶಕ ಸಂತೋಷ್ ಕೋಡಂಕೇರಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನೂತನ ಚಿತ್ರ ಪ್ರೊಡಕ್ಷನ್ ನಂಬರ್ – 2 ಚಲನಚಿತ್ರದ ಎರಡನೇ ಹಂತದ ಚಿತ್ರೀಕರಣದಲ್ಲಿ ಸುಳ್ಯದ ಕಲಾವಿದರು ನಟಿಸುತ್ತಿದ್ದಾರೆ.

ಬೆಂಗಳೂರಿನ ಕಂಠಿರವ ಸ್ಟುಡಿಯೋದಲ್ಲಿ ಬಿರುಸಿನಿಂದ ಚಿತ್ರೀಕರಣ ನಡೆಯುತ್ತಿದೆ. ನಟ ನಿರ್ದೇಶಕ ಮತ್ತು ಜ್ಯೋತಿಷ್ಯರಾದ ಎಚ್ . ಭೀಮರಾವ್ ವಾಷ್ಠರ್, ತಿರುಮಲೇಶ್ವರಿ ಅರ್ಬಡ್ಕ ಜಾಲ್ಸೂರು, ಸುಮತಿ ನಾಯಕ್ ಸುಳ್ಯ, ಹರ್ಷಿತ್ ಕೆ ಸುಳ್ಯ, ರಜಾಕ್ ಸುಳ್ಯ, ದರ್ಶನ್ ಸುಳ್ಯ ಶೂಟಿಂಗಲ್ಲಿ ಭಾಗವಹಿಸಿದ್ದರು. ಚಿತ್ರದ ಕಥೆ ಬರೆದ ಪಾವನ ಸಂತೋಷ್ ಸುಳ್ಯ ರವರು ಕೂಡ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here