ಆಲೆಟ್ಟಿ :ನೂಜಿನಮೂಲೆ ಶ್ರೀಮತಿ ಕಮಲ ನಾಯ್ಕ್ ರವರ ಶ್ರದ್ಧಾಂಜಲಿ ಕಾರ್ಯಕ್ರಮ

0

 

 

ಆಲೆಟ್ಟಿ ಗ್ರಾಮದ ನೂಜಿನಮೂಲೆ ದಿ.ಬಟ್ಯ ನಾಯ್ಕ್ ರವರ ಪತ್ನಿ ಶ್ರೀಮತಿ ಕಮಲ ನಾಯ್ಕ್ ರವರು ಅ‌.11 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಅ.22 ರಂದು ಮೃತರ ಸ್ವಗೃಹ ಹಾರ್ಕಜೆಯಲ್ಲಿ ನಡೆಯುವ
ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎ.ಕೃಷ್ಣ ನಾಯ್ಕ್ ಚೊಕ್ಕಾಡಿ ಯವರು ನುಡಿನಮನ ಸಲ್ಲಿಸಿದರು. ಆಲೆಟ್ಟಿ ಸೊಸೈಟಿ ನಿವೃತ್ತ ಸಿ.ಇ.ಒ.ಸುಧಾಮ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಮೃತರ ಪುತ್ರರಾದ ಜನಾರ್ದನ ನಾಯ್ಕ್ ನೂಜಿನಮೂಲೆ, ಸಂಜೀವ ನಾಯ್ಕ್ ನೂಜಿನಮೂಲೆ, ಮಾಧವ ನಾಯ್ಕ್ ಹಾರ್ಕಜೆ, ಪುತ್ರಿ ಶ್ರೀಮತಿ ಜಯಂತಿ ಜನಾರ್ದನ ನಾಯ್ಕ್ ಅಜ್ಜಾವರ, ಸೊಸೆಯಂದಿರಾದ ಶ್ರೀಮತಿ ಸುನೀತಾ ಲಿಂಗಪ್ಪ ನಾಯ್ಕ್ ಅಡ್ಕಾರ್,ಶ್ರೀಮತಿ ಕುಸುಮಾ ನೂಜಿನಮೂಲೆ , ಶ್ರೀಮತಿ ಪುಷ್ಪಾವತಿ ನೂಜಿನಮೂಲೆ, ಶ್ರೀಮತಿ ಉಷಾ ಹಾರ್ಕಜೆ,ಶ್ರೀಮತಿ ವಿಶಾಲಾಕ್ಷಿ ರಾಜೀವ ನಾಯ್ಕ್ ಹಾರ್ಕಜೆ, ಅಳಿಯ ಜನಾರ್ದನ ನಾಯ್ಕ್ ಅಜ್ಜಾವರ ಮತ್ತು ಮೊಮ್ಮಕ್ಕಳು, ಮರಿ ಮಕ್ಕಳು ಹಾಗೂ ಕುಟುಂಬದ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.