ಗುತ್ತಿಗಾರಿನಲ್ಲಿ ಘನ ತಾಜ್ಯ ವಿಲೇವಾರಿ ಘಟಕದ ಉದ್ಘಾಟನೆ

0

 

ಸಚಿವ ಅಂಗಾರ, ಗ್ರಾ.ಪಂ ಸಿಬ್ಬಂದಿಗಳಿಗೆ, ಘನ ತ್ಯಾಜ್ಯ ಘಟಕದ ಸಿಬ್ಬಂದಿಗಳಿಗೆ ಸನ್ಮಾನ

ಹಲವರು ಪ್ರಧಾನಿಗಳಾದ್ರು ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ವಾಜಪೇಯಿ, ಮೋದಿ ಬರಬೇಕಿತ್ತು: ಎಸ್ ಅಂಗಾರ

ಗುತ್ತಿಗಾರಿನಲ್ಲಿ ಇಂದು ಗ್ರಾ.ಪಂ ಗುತ್ತಿಗಾರಿನ ಘನ ತಾಜ್ಯ ವಿಲೇವಾರಿ ಘಟಕದ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು. ಸಚಿವ ಎಸ್ ಅಂಗಾರ ಘಟಕವನ್ನು ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಸ್ ಅಂಗಾರ
ಗುತ್ತಿಗಾರಿನ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ 6 ವರ್ಷ ಸೇವೆ ಮಾಡಿ ಮತ್ತೆ ಅವಕಾಶ ಸಿಕ್ಕರೆ ಇಲ್ಲೇ ಸೇವೆ ಮಾಡ್ತೇನೆ ಎಂದ್ರೆ ಇಲ್ಲಿನ ವಾತವರಣ, ಜನರ ಪ್ರೀತಿ ಕಾರಣ ಎಂದರು. ನಮ್ಮ ದೇಶದಲ್ಲಿ ಹಲವಾರು ಜನ ಪ್ರಧಾನ ಮಂತ್ರಿ ಆಗಿದ್ದರೂ ವಾಜಪೇಯಿಯವರನ್ನು ಜನ ನೆನಪಿಸುತ್ತಾರೆ ಯಾಕೆಂದರೆ ಹಳ್ಳಿನ ಗಾಡಿನ ರಸ್ತೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿ ಆಯ್ತು. ಮತ್ತೆ ಜನ ನೆನಪಿಡುವ ಕೆಲಸ ಮಾಡಲು ನರೇಂದ್ರ ಮೋದಿಯೇ ಬರಬೇಕಾಯ್ತು ಎಂದರು. ನನ್ನ ಮೀನುಗಾರಿಕೆ ಇಲಾಖೆಗೆ 2400 ಕೋಟಿ ಅನುದಾನ ತರಿಸಿದ್ದೇವೆ. ನಮ್ಮ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಿದೆ ಎಂದವರು ಹೇಳಿದರು. ನನಗಂತು ವೈಯಕ್ತಿಕವಾಗಿ ಅಧಿಕಾರ ಹೋದ್ರೂ ಚಿಂತೆಯಿಲ್ಲ. ಉತ್ತು ಕೆಲಸ ಮಾಡವಷ್ಟು ಸಾಮರ್ಥ್ಯ ನನ್ನಲ್ಲಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

 

ಈ ಸಂದರ್ಭ ಸಚಿವ ಎಸ್ ಅಂಗಾರ, ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವಿಸಲ್ಲಿಸಿದ್ದ ಡಾ. ಚೈತ್ರಾ ಬಾನು, ಗುತ್ತಿಗಾರು ಗ್ರಾ.ಪಂ ಪಿಡಿಒ ಧನಪತಿ, ಗ್ರಾಮ ಕರಣಿಕ ಲೋಕೇಶ್ ಕುಚ್ಚಾಲ, ಹಾಲಮಜಲು ವೆಂಕಟೇಶ್ವರ ಸಭಾಭವನದ ಮಾಲಕ ಯತೀಂದ್ರ ಕಟ್ಟಕೋಡಿ, ಬಿಲ್ಡಿಂಗ್ ಕಂಟ್ರಾಕ್ಟರ್ ಪ್ರೀತಂ ಗಣೇಶ್, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಜಯಪ್ರಕಾಶ ಕೆ, ತೇಜೇಶ್ವರಿ, ಅನಿತಾ ಬಿ, ಚೋಮಯ್ಯ, ಗ್ರಂಥಾಲಯ ಮೇಲ್ವಿಚಾರಕಿ ಅಭಿಲಾಷ, ವಿಕಲಚೇತನರ ಪುನರ್ವಸತಿ ಕಾರ್ಯಕರ್ತೆ ಕಾವೇರಿ, ಸ್ವಚ್ಛತಾ ಸಿಬ್ಬಂದಿಗಳಾದ ರತ್ನಾವತಿ, ವಸಂತಿ, ರಮಿತಾ, ಡೈವರ್ ವೇಣುಗೋಪಾಲ ಅವರುಗಳನ್ನು ಸನ್ಮಾನಿಸಲಾಯಿತು.

ಸಭಾ ಅಧ್ಯಕ್ಷತೆಯನ್ನು ಗುತ್ತಿಗಾರು ಗ್ರಾ.ಪಂ.ನ ಅಧ್ಯಕ್ಷೆ ರೇವತಿ ಅಚಳ್ಳಿ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಪ್ರಮೀಳಾ ಎರ್ದಡ್ಕ, ಗ್ರಾ.ಪಂ ಸದಸ್ಯರುಗಳಾದ ವೆಂಕಟ್ ವಳಲಂಬೆ, ವಿಜಯ ಚಾರ್ಮತ, ಜಯದೀಶ ಬಾಕಿಲ, ಹರೀಶ್ ಕೊೈಲ, ಲತಾ ಆಜಡ್ಕ, ಮಾಯಿಲಪ್ಪ ಕೊಂಬೆಟ್ಟು, ಲೀಲಾವತಿ ಅಂಜೇರಿ, ಭಾರತಿ, ಅನಿತಾ, ಲೀಲಾವತಿ, ಸುಮಿತ್ರ’ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಇಂಜಿನಿಯರ್ ಮಣಿಕಂಠ ವೇದಿಕೆಯಲ್ಲಿದ್ದರು. ಭಾರತಿ ಮತ್ತು ಲೀಲಾವತಿ ಪ್ರಾರ್ಥಿಸಿ, ವಿಜಯ ಚಾರ್ಮತ ಸ್ವಾಗತಿಸಿದರು. ವೆಂಕಟ್ ವಳಲಂಬೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪಿಡಿಒ ಧನಪತಿ ವಂದಿಸಿದರು. ಕಿಶೋರ್ ಕುಮಾರ್ ಬೊಮ್ಮದೆರೆ ಪೈಕ ಕಾರ್ಯಕ್ರಮ ನಿರೂಪಿಸಿದರು.

ಪೊಟೋ: ಪ್ರಕೃತಿ ಸ್ಟುಡಿಯೋ ಗುತ್ತಿಗಾರು