ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ನ ಬಳಕೆಯ ಬಗ್ಗೆ ಕಾರ್ಯಗಾರ

0

 

 

ಬೆಳೆಯುತ್ತಿರುವ ತಂತ್ರಜ್ಞಾನ ಜಗತ್ತಿನಲ್ಲಿ ಗಮನ ಸೆಳೆದಿರುವ ಕೃತಕ ಬುದ್ಧಿಮತ್ತೆ ಹಾಗು ಯಂತ್ರ ಕಲಿಕೆಯ ಅರ್ಥ, ವಿಶೇಷತೆ ಹಾಗು ಅದರ ಬಳಕೆಯ ಬಗ್ಗೆ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಗಣಕ ತಂತ್ರಜ್ಞಾನದ ಪ್ರಾಧ್ಯಪಕರಾದ ಡಾ. ಸವಿತಾ ಸಿ. ಕೆ. ಅವರು ಅ. 21ರಂದು 8, 9, ನೇ ತರಗತಿಯ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. 9ನೇ ತರಗತಿಯ ಅತುಲ್ಯ ಕೆ. ಕಾರ್ಯಗಾರಕ್ಕೆ ಹಾಜರಾದ ಎಲ್ಲರನ್ನು ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು.

ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಂತೆ ಸೆನ್ಸರ್ ಮೂಲಕ ಕೃತಕ ಬುದ್ದಿಮತ್ತೆಯ ರೋಬೋಟ್ ಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅದರ ಉಪಕರಣದ ಮಾದರಿಯ ಮೂಲಕ ಇಬ್ಬರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಾದ ಧ್ಯಾನ ಟಿ. ಡಿ. ಹಾಗು ಜೀವನ್ ಪಿ.ರೈ ತೋರಿಸಿಕೊಟ್ಟರು. ಭವಿಷ್ಯದಲ್ಲಿ ಪ್ರತಿ ಮನೆಯಲ್ಲೂ ಯಂತ್ರ ಕಲಿಕೆಯ ಬಳಕೆಯ ಬಗ್ಗೆ ಮನದಟ್ಟಾಗುವಂತೆ ವಿವರಿಸಿದರು.
ಮಕ್ಕಳು ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನ ಹಾಗು ಅದರ ಸದ್ಭಳಕೆಯ ಬಗ್ಗೆ ತಿಳಿದುಕೊಳ್ಳುತಿರುವುದನ್ನು ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ. ವಿ. ಹಾಗು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಮೆಚ್ಚಿಕೊಂಡಿದ್ದು ಹೆಚ್ಚಿನ ಕಲಿಕೆಗೆ ಶುಭ ಹಾರೈಸಿರುತ್ತಾರೆ . ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಶಿಕ್ಷಕರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು. 9ನೇ ತರಗತಿಯ ಮನ್ವಿತ್ ನ ವಂದನಾರ್ಪಣೆಯೊಂದಿಗೆ ಕಾರ್ಯಗಾರವು ಮುಕ್ತಾಯ ಗೊಂಡಿತು.