ಸುಳ್ಯ  ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ : ತುರ್ತು ಸಂದರ್ಭದಲ್ಲಿ ಚುಚ್ಚು ಮದ್ದು ನೀಡುವ ವಿಧಾನದ ಬಗ್ಗೆ ವಿಚಾರ ಸಂಕಿರಣ

0

 

ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗ, ಕೆ.ವಿ.ಜಿ. ದಂತ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಸುಳ್ಯ, ಇದರ ವತಿಯಿಂದ ತುರ್ತು ಸಂದರ್ಭದಲ್ಲಿ ಚುಚ್ಚು ಮದ್ದು ನೀಡುವ ವಿಧಾನದ ಬಗ್ಗೆ ವಿಚಾರ ಸಂರ್ಕೀಣವನ್ನು   ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಸಭಾಂಗಣದದಲ್ಲಿ ನಡೆಸಲಾಯಿತು.

ಬಾಯಿ ಮತ್ತು ಮುಖದ ಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಡಿ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ರವರು ವಿಚಾರ ಸಂರ್ಕೀಣದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಸ್ನಾತಕೋತ್ತರ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಶರತ್‌ಕುಮಾರ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸಾಯಿಗೀತಾ ಜ್ಞಾನೇಶ್, ಗಾರ್ಡನ್ ಹಾಸ್ಪಿಟಲ್ ಸುಳ್ಯ, ಹಾಗೂ ಡಾ. ಗಣೇಶ್ ಶರ್ಮ, ಎಸ್.ವಿ.ಎಮ್. ಆಸ್ಪತ್ರೆ ಸುಳ್ಯ, ಪೂರ್ತಿ ದಿನ ಶಿಬಿರವನ್ನು ನಡೆಸಿಕೊಟ್ಟರು. ಡಾ. ಮಹಾಬಲೇಶ್ವರ ಸಿ.ಹೆಚ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿಕೊಟ್ಟರು. ಒಟ್ಟು ೮೦ ಹೌಸ್ ಸರ್ಜೆನ್ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಡಾ. ರಚನಾ ಪಿ.ಬಿ. ವಂದನಾರ್ಪಣೆ ಮಾಡಿದರು.