ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಡೆಂಟಲ್ ಸ್ಕ್ರೀನಿಂಗ್ ಕಾರ್ಯಕ್ರಮ

0

 

ರಾಷ್ಟ್ರೀಯ ಆರ್ಥೋಡೊಂಟಿಕ್ ಸಪ್ತಾಹ – 2022 ಇದರ ಅಂಗವಾಗಿ ಸುಳ್ಯ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಆರ್ಥೋಡೊಂಟಿಕ್ಸ್ ಮತ್ತು ಡೆಂಟೋಫೇಷಿಯಲ್ ಆರ್ಥೋಪೇಡಿಕ್ಸ್ ವಿಭಾಗದಿಂದ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ 6,7,8,9 ನೇ ವಿದ್ಯಾರ್ಥಿಗಳಲ್ಲಿ ವಕ್ರ ಹಲ್ಲಿನ ತಪಾಸಣೆಯನ್ನು ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಶಾಲೆಯ ಪ್ರಾಂಶುಪಾಲ ಅರುಣ್ ಕುಮಾರ್ ಎಸ್. ಆಗಮಿಸಿದ ದಂತವೈದ್ಯಕೀಯದ ಇನ್ ಹೌಸ್ ಸರ್ಜನ್ಸ್ ಗಳನ್ನು ಸ್ವಾಗತಿಸಿದರು. ವಕ್ರದಂತಗಳನ್ನು ಆರ್ಥೋಡೊಂಟಿಕ್ಸ್ ಶಸ್ತ್ರ ಚಿಕಿತ್ಸೆ ಅಥವಾ ಬ್ರೇಸಸ್ ಮೂಲಕ ಹೇಗೆ ಸರಿಪಡಿಸಿ ಹಲ್ಲಿನ ಸೌಂದರ್ಯವನ್ನು ಕಾಪಾಡಿ ಕೊಳ್ಳಬಹುದು ಎಂದು ಡಾ. ಹನೀಶ್ ರವರು ಮಕ್ಕಳ ಮನದಟ್ಟಾಗುವಂತೆ ಚಿತ್ರಗಳು ಹಾಗು ಉದಾಹರಣೆಗಳ ಮೂಲಕ ತಿಳಿಸಿದರು. ಅಲ್ಲದೆ ಈ ಚಿಕಿತ್ಸೆಗೆ ಕೆವಿಜಿ ಡೆಂಟಲ್ ಆಸ್ಪತ್ರೆಯಲ್ಲಿ ತಗಲುವ ಕನಿಷ್ಠ ಖರ್ಚಿನ ಬಗ್ಗೆಯೂ ಹೇಳಿದರು.


ಎಳೆ ವಯಸಿನಲ್ಲೇ ಎಲ್ಲಾ ರೀತಿಯ ದಂತ ಆರೋಗ್ಯವನ್ನು ಕಾಪಾಡಿಕೊಂಡು ಕುರೂಪತನವನ್ನು ಹೋಗಲಾಡಿಸುವುದು ಅತ್ಯಗತ್ಯ ಎಂದು ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ. ವಿ. ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಯು.ಜೆ. ಹೇಳಿದರು.

ವಿದ್ಯಾರ್ಥಿಗಳ ದಂತ ಪರೀಕ್ಷೆಯ ನಂತರ ಶಿಕ್ಷಕಿ ಸುಜಾತಾ ಕೆ. ಎಲ್ಲರಿಗೂ ವಂದನಾರ್ಪಣೆಗೈದರು.