ಕೆವಿಜಿ ಐಪಿಎಸ್ ನಲ್ಲಿ ‘ ಸ್ವ- ರಕ್ಷಣಾ ಕಾರ್ಯಾಗಾರ ‘

0

 

 

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಇವರ ನಿರ್ದೇಶನದಂತೆ ಸಮಾಜಹಿತ ಸಂಸ್ಥೆಯಾದ ಕಾರ್ತಿಕ್ – ಸ್ವ-ರಕ್ಷಾ ಫಾರ್ ವಿಮೆನ್ ಇದರ ಸ್ಥಾಪಕ ಕಾರ್ತಿಕ್ ಎಸ್. ಕಟೀಲ್ ಮತ್ತು ಅವರ ಮಾತ್ರಶ್ರೀ ಶೋಭಾಲತಾ ಅವರ ನೇತೃತ್ವದಲ್ಲಿ 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ಹಾಗು ಕೆಟ್ಟ ಸ್ಪರ್ಶ, ಸ್ವ-ರಕ್ಷಣೆಯ ತಂತ್ರಗಳು, ಮೊಬೈಲ್ ನ ನಿಯಮಿತ ಸದ್ಬಳಕೆಯ ಬಗ್ಗೆ ಕಾರ್ಯಗಾರವನ್ನು ಅ.27 ರಂದು ಹಮ್ಮಿಕೊಳ್ಳಲಾಯಿತು.

ಶಾಲಾ ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಉಪಸ್ಥಿತರನೆಲ್ಲಾ ಸ್ವಾಗತಿಸಿ ಕಾರ್ತಿಕ್ ಎಸ್. ಕಟೀಲ್ ಹಾಗು ಶೋಭಲತಾರ ಸಂಪೂರ್ಣ ಪರಿಚಯ ಸಭೆಗೆ ಮಾಡಿಕೊಟ್ಟರು.
ಎರಡು ಗಂಟೆಗಳ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಅಸಹನೀಯ ಸ್ಪರ್ಶಗಳನ್ನು ತಿಳಿದುಕೊಂಡು, ವಿರೋಧಿಸುವುದಲ್ಲದೆ ಅದನ್ನು ಎದುರಿಸುವುದರಲ್ಲಿ ಸಹಾಯಕವಾಗುವ ಸುಲಭ ಹಾಗು ಅಗತ್ಯದ 5 ತಂತ್ರಗಳನ್ನು ಪ್ರದರ್ಶಿಸಿ ಮಕ್ಕಳಿಗೆ ಸ್ವರಕ್ಷಣೆಯ ಅನಿವಾರ್ಯತೆಯನ್ನು ಮನದಟ್ಟು ಮಾಡಿಸಿದರು. ಪ್ರಸ್ತುತವಾಗಿ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಕೋಪ, ಅಸಹನೆ, ಖಿನ್ನತೆ, ಓದಿನ ಮೇಲಿನ ದುಷ್ಪರಿಣಾಮಗಳು, ತಮಗೂ ಹೆತ್ತವರಿಗೂ ಆಗುವ ಸಮಸ್ಯೆಗಳನ್ನು ಚಿತ್ರಗಳ ಹಾಗು ಉದಾಹರಣೆಗಳ ಮೂಲಕ ತಿಳಿಸಿಕೊಟ್ಟರು.

ವಿದ್ಯಾರ್ಥಿಗಳ ಜೀವನದಲ್ಲಿ ಅತಿ ಅಗತ್ಯವಾಗಿ ಬೇಕಾಗಿರುವ ಇಂತಹ ಕಲಿಕೆಯನ್ನು ನೀಡುವ ಪ್ರಯತ್ನಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾಪ್ರಸಾದ್ ಕೆ. ವಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರು,ಉಪ ಪ್ರಾಂಶುಪಾಲೆ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಗಣಿತ ಶಿಕ್ಷಕಿ ಸುಜಾತಾ ಕೆ. ವಂದಿಸಿದರು.