ಪೆರಾಜೆ ಗ್ರಾ.ಪಂ. ಉಪಚುನಾವಣೆ : ಬಿರುಸಿನ ಮತದಾನ

0

ಪೆರಾಜೆ ಗ್ರಾ.ಪಂ. ನ ಒಂದು ಸ್ಥಾನಕ್ಕೆ ಇಂದು ಉಪಚುನಾವಣೆ ನಡೆಯುತ್ತಿದ್ದು, ಬಿರುಸಿನ ಮತದಾನ ನಡೆಯುತ್ತಿದೆ. ಪೆರಾಜೆ ಗ್ರಾ.ಪಂ. ಸದಸ್ಯ ಗಾಂಧಿಪ್ರಸಾದ್ ಬಂಗಾರಕೋಡಿಯವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.

ವಾರ್ಡ್‌ನ 698  ಮತದಾರರಲ್ಲಿ ಇದೀಗ ಬಂದ ಮಾಹಿತಿಯ ಪ್ರಕಾರ 280 ಮಂದಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪಕ್ಷೇತರರಾಗಿ ತುಳಸಿ ಗಾಂಧಿಪ್ರಸಾದ್ ಬಂಗಾರಕೋಡಿ, ಬಿಜೆಪಿ ಬೆಂಬಲಿತರಾಗಿ ಪ್ರವೀಣ್ ಮಜಿಕೋಡಿ ಮತ್ತು ಪಕ್ಷೇತರರಾಗಿ ಜಯಪ್ರಕಾಶ್ ಹೊದ್ದೆಟ್ಟಿ ಚುನಾವಣಾ ಕಣದಲ್ಲಿದ್ದಾರೆ. ಕುಂಬಳಚೇರಿ ಹಿ.ಪ್ರಾ.ಶಾಲೆಯಲ್ಲಿ ಮತದಾನ ನಡೆಯುತ್ತಿದೆ.