ಪಂಜ ಗ್ರಾಮ ಪಂಚಾಯತ್ ನಲ್ಲಿ ಕೋಟಿ ಕಂಠ ಗಾಯನ

0

ಪಂಜ ಗ್ರಾಮ ಪಂಚಾಯತ್ ನಲ್ಲಿ ಕೋಟಿ ಕಂಠ ಗಾಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಹಾಗೂ ಸಂಕಲ್ಪವಿಧಿ ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕೆ. ಪದ್ಮಯ್ಯ, ಪಂಚಾಯತ್ ಸದಸ್ಯ ಲಕ್ಷ್ಮಣ ಗೌಡ, ಗ್ರಾಮ ಸಿಬ್ಬಂದಿ ವರ್ಗದವರು, ಪಂಚಮ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಹೇಮಲತಾ ಪಲ್ಲೋಡಿ, ಎಂ ಬಿ ಕೆ ಶ್ರೀಮತಿ ತ್ರಿವೇಣಿ ಬೊಳ್ಳಾಜೆ, ಎಲ್ ಸಿ ಆರ್ ಪಿ ಶ್ರೀಮತಿ ಸವಿತಾ ಕೆರೆಮೂಲೆ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಶ್ರೀಮತಿ ಮೀನಾಕ್ಷಿ, ಗ್ರಂಥಪಾಲಕಿ ಶ್ರೀಮತಿ ಚಿತ್ರಕಲಾ, ಖ್ಯಾತ ಹಾಡುಗಾರ್ತಿ ಕು. ಸುಮಾ ಕೋಟೆ ಮತ್ತವರ ತಂದೆ ಮಹೇಶ್ ಕೋಟೆ ಹಾಗೂ ಸ್ವಸಹಾಯ ಸಂಘದ ಸದಸ್ಯೆಯರುಗಳು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶೇಷ ಚೇತನರು ಭಾಗವಹಿಸಿದ್ದರು.