ನಾಲ್ಕೂರು : ಹೊಂಬೆಳಕು ಬಳಗದ ವರ್ಷಾಚರಣೆ

0

 

 

ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಗುತ್ತಿಗಾರು, ನಾಲ್ಕೂರು ಗ್ರಾಮದ ಹೊಂಬೆಳಕು ಬಳಗ ಇದರ ವರ್ಷಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಸೇನಾ ನೇಮಕಾತಿ ಮಾರ್ಗಸೂಚಿ ಹಾಗೂ ಸಾರ್ವಜನಿಕ ಸೇವೆಗಳ ಪರೀಕ್ಷೆ ತಯಾರಿ ಬಗ್ಗೆ ಮಾಹಿತಿ ಕಾರ್ಯಗಾರ ಇಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾತ್ಮ ಗಾಂಧಿ ಗ್ರಾಮ ಸೇವಾ ತಂಡ ಮಾಡಪ್ಪಾಡಿ ಇದರ ಸಂಚಾಲಕರಾದ ಎಂ.ಡಿ. ವಿಜಯಕುಮಾರ್ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ
ಅಧ್ಯಕ್ಷತೆಯನ್ನು ತಂಡದ ಸಂಚಾಲಕರಾದ ಚರಣ್ ದೇರಪ್ಪಜ್ಜನಮನೆ ವಹಿಸಿದ್ದರು. ತರಬೇತುದಾರರಾಗಿ ಭಾರತೀಯ ಭೂಸೇನೆಯ ನಿರುತ್ತಾ ಸೇನಾಧಿಕಾರಿ ಕ್ಯಾಪ್ಟನ್ ಸುದಾನಂದ ಮಾವಿನಕಟ್ಟೆ, ಸೇನಾ ನೇಮಕಾತಿ ಬಗ್ಗೆ ಮಾಹಿತಿ ನೀಡಿದರು.

ಸಾರ್ವಜನಿಕ ಸೇವೆಗಳ ಪರೀಕ್ಷೆ ತಯಾರಿ ಬಗ್ಗೆ ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಶ್ರೀಮತಿ ಚೆನ್ನಮ್ಮ ಪ್ರೌಢಶಾಲಾ ವಿಭಾಗದ ಮುಖ್ಯ ಗುರುಗಳಾದ ನೆಲ್ಸನ್ ಕ್ಯಾ ಕ್ಯಾಸ್ಟಿಲಿನೊ ಉಪಸ್ಥಿತರಿದ್ದರು. ತಂಡದ ಸದಸ್ಯ ಸುರೇಶ್ ಬಾಳಿಲ ತಂಡದ ಒಂದು ವರ್ಷದ ಕೆಲಸ ಕಾರ್ಯಗಳ ಬಗ್ಗೆ ಸಭೆಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಭಾಗವಹಿಸಿದ್ದರು. ಹೊಂಬೆಳಕು ತಂಡದ ಸದಸ್ಯರಾದ ಡಿ.ಆರ್ ಉದಯಕುಮಾರ್ ಅವರು ಸ್ವಾಗತಿಸಿದರು. ತಂಡದ ಸದಸ್ಯ ದಿನೇಶ್ ಹಾಲೆಮಜಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. (ವರದಿ ಡಿ.ಹೆಚ್.)