ಇಂದು ಸುಳ್ಯ ರಾಮ ಭಜನಾ ಮಂದಿರದಲ್ಲಿ 80 ನೇ ವರ್ಷದ ಏಕಾಹ ಭಜನೆ

0

 

 

ಸುಳ್ಯದ ಶ್ರೀ ರಾಂ ಪೇಟೆಯಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ 80 ನೇ ವರ್ಷದ ಏಕಾಹ ಭಜನೆಯು ನ.4 ರಂದು ಪ್ರಾತ: ಕಾಲ ಪ್ರಾರಂಭಗೊಂಡಿತು.

ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ದೀಪ ಪ್ರಜ್ವಲಿಸಿದರು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ಸುಳ್ಯ,ಪುರೋಹಿತ ನಾಗರಾಜ್ ಭಟ್, ನಟರಾಜ ಶರ್ಮ , ಸದಸ್ಯರಾದ ಮಹಾಬಲ ಕೇರ್ಪಳ, ಗೋಪಾಲ ನಡುಬೈಲು, ಶ್ರೀನಿವಾಸ, ಭಾಸ್ಕರ ನಾಯರ್, ಗಣೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಭಜನೆಯು ಇಂದು ಸೂರ್ಯೋದಯದಿಂದ ನಾಳೆ ಸೂರ್ಯೋದಯದ ಪರ್ಯಂತ ನಿರಂತರ 24 ಗಂಟೆಗಳ ಕಾಲ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರಿಂದ ಭಜನಾ ಸೇವೆ ನಡೆಯಲಿರುವುದು.