ಬೊಳುಬೈಲು :ಪೀಸ್ ಸ್ಕೂಲ್ ನಲ್ಲಿ ಲಸಿಕಾ ಶಿಬಿರ ಕಾರ್ಯಕ್ರಮ

0

 

ಸುಳ್ಯ ಬೊಳುಬೈಲು ಪೀಸ್ ಸ್ಕೂಲ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಇದರ ಜಂಟಿ ಆಶ್ರಯದಲ್ಲಿ ‘ಲಸಿಕಾ ಶಿಬಿರ’ ಕಾರ್ಯಕ್ರಮ ಪೀಸ್ ಸ್ಕೂಲ್ ವಠಾರದಲ್ಲಿ ಇಂದು ನಡೆಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳ್ಳಾರೆ ಇದರ ಆರೋಗ್ಯಾಧಿಕಾರಿ ಡಾ.ಗಿರೀಶ್ ಮುಂದಿನ ತಿಂಗಳಿನಲ್ಲಿ ಒಂದರಿಂದ ಹದಿನೈದು ವಯಸ್ಸಿನ ಮಕ್ಕಳಿಗೆ ನೀಡಲಾಗುವ ಜೆಇ(ಜಪಾನೀಸ್ ಎನ್ಸಫಾಲಿಟಿಸ್) ಲಸಿಕೆ ಪಡೆಯುವ ಕುರಿತು ಪೋಷಕರಿಗೆ ತಿಳಿಪಡಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎಂ. ಬಾಬು ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ತೌಹೀದ್ ಎಜುಕೇಶನ್ ಹಾಗೂ ಚಾರಿಟೇಬಲ್ ಫೌಂಡೇಶನ್ ಬೊಳುಬೈಲು ಇದರ ಅಧ್ಯಕ್ಷ ಕೆ. ಅಬೂಬಕರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಮುಜೀಬ್ ಪೈಚಾರ್ ಮತ್ತು ಗೀತಾ ಗೋಪಿನಾಥ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್, ಪೈಚಾರ್ ಇದರ ಅಧ್ಯಕ್ಷರ ಡಾ. ಆರ್. ಬಿ. ಬಶೀರ್, ಸ್ಥಳೀಯರಾದ ಅಬ್ದುಲ್ಲಾ ಸುಳ್ಯಕ್ಕಾರ್ಸ್ ಟ್ರೇಡರ್ಸ್, ಬಿ. ಅಬ್ಲಾಸ್, ಫಾರೂಕ್ ಪೈಚಾರ್, ಅಬ್ದುಲ್ ಗಫೂರ್ ಬೊಳುಬೈಲು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಒಂದನೇ ಮತ್ತು ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಟಿಪಿ ಮತ್ತು ಟಿಟಿ ಲಸಿಕೆಯು ನೀಡಲಾಯಿತು.

ಪೀಸ್ ಸ್ಕೂಲ್ ಪ್ರಾಂಶುಪಾಲರಾದ ಮುಹಮ್ಮದ್ ಸೈಫುಲ್ಲಾ ಸ್ವಾಗತಿಸಿ ಅರೇಬಿಕ್ ಶಿಕ್ಷಕ ಹಸೈನಾರ್ ಸ್ವಲಾಹಿ ವಂದಿಸಿದರು.
ಆರ್. ಬಿ. ಬಶೀರ್ ಕಾರ್ಯಕ್ರಮ ನಿರೂಪಿಸಿದರು.