ಮಕ್ಕಳ ದಿನಾಚರಣೆ ಮತ್ತು ದತ್ತಿನಿಧಿ ಪುರಸ್ಕಾರ ವಿತರಣೆ

0

ಸ.ಕಿ.ಪ್ರಾ.ಶಾಲೆ ಮುಗೇರು-ಮಣಿಮಜಲು ಇಲ್ಲಿ ನ.14ರಂದು ಮಕ್ಕಳ ದಿನಾಚರಣೆ ಮತ್ತು ದತ್ತಿನಿಧಿ ಪುರಸ್ಕಾರ ವಿತರಣೆ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾರತೀಯ ಜೀವವಿಮಾ ನಿಗಮದ ಸುಳ್ಯ ಶಾಖೆಯ ಮೆನೇಜರ್ ದೇವಿಪ್ರಸಾದ್ ನಾಯಕ್ ಉಪಸ್ಥಿತರಿದ್ದರು. ದತ್ತಿನಿಧಿ ಸ್ಥಾಪಕ ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿ ಮಾಧವ ಜಾಲ್ಸೂರುರವರು ದತ್ತಿನಿಧಿ ಪುರಸ್ಕಾರ ವಿತರಿಸಿದರು.


ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಪ್ಪ ನಾಯ್ಕ, ಗ್ರಾ.ಪಂ. ಉಪಾಧ್ಯಕ್ಷೆ ದೇವಕಿ, ನಿವೃತ್ತ ಅಧ್ಯಾಪಕ ಆನಂದ ಮಾಸ್ತರ್ ಅಕ್ಕಿಮಲೆ, ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ಮಕ್ಕಳ ದಿನಾಚರಣೆಯ ಬಗ್ಗೆ ಭಾಷಣ ನಡೆಯಿತು. ವಿದ್ಯಾರ್ಥಿಗಳ ಪೋಷಕರು, ಸಹ ಅಧ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.