ಭಾರತೀಯ ಮಜ್ದೂರ್ ಸಂಘ ಸುಳ್ಯ ತಾಲೂಕು ಕಚೇರಿಯ ಉದ್ಘಾಟನಾ ಕಾರ್ಯಕ್ರಮ

0

ಭಾರತೀಯ ಮಜ್ದೂರ್ ಸಂಘ ಸುಳ್ಯ ತಾಲೂಕು ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು ಕರ್ನಾಟಕ ಸರಕಾರದ ಮೀನುಗಾರಿಕಾ ಸಚಿವರು ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್ ಅಂಗಾರ ಅವರು ಭಾರತೀಯ ಮಜ್ದೂರು ಸಂಘದ ಕಚೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕೂಡ ಅವರು ಭಾಗವಹಿಸಿ ಸರಕಾರದ ಪ್ರಯೋಜನಗಳನ್ನು ಪಡೆದುಕೊಂಡು ಅದರ ವಿರುದ್ಧ ದಾರಿ ತಪ್ಪಿಸುವ ಸಂಘಟನೆಗಳಿಗೆ ಸೇರದಂತೆ ಕರೆ ನೀಡಿದರು.

ಭಾರತೀಯ ಮಜ್ದೂರ್ ಸಂಘ ಕಾರ್ಮಿಕರಿಗೆ ಈ ಕಾರ್ಯಾಲಯದಿಂದ ಉತ್ತಮವಾದ ಸೇವೆ ಸಿಗಲಿ ಎಂದು ಆಶಿಸಿದರು ಮತ್ತು ಮೀನುಗಾರಿಕಾ ವಲಯದಲ್ಲಿ ಒಳನಾಡು ಮೀನುಗಾರಿಕೆಯಿಂದ ಹೊಸ ರೀತಿಯ ಉದ್ಯೋಗ ಹಾಗೂ ಉಪಕಸುಬು ಸಿಗಲಿದೆ ಅಲ್ಲದೆ ಜನಸಾಮಾನ್ಯರು ಈ ವೃತ್ತಿಯಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಸಬಲರಾಗಬಹುದು ಮತ್ತು ಈ ಮೀನುಗಾರಿಕೆ ಕಡಿಮೆ ಜಾಗದಿದಲ್ಲಿ ಹೆಚ್ಚು ಆದಾಯವನ್ನು ತರುವಂತಹ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆ ಈಗಾಗಲೇ ಹಲವು ಯೋಜನೆಗಳನ್ನು ತಂದಿರುತ್ತದೆ ಮತ್ತು ಈ ಬಗ್ಗೆ ಕೇಂದ್ರ ಸರಕಾರದಿಂದ ಮೀನುಗಾರಿಕಾ ಇಲಾಖೆಗೆ ಪ್ರಶಸ್ತಿ ಬಂದಿರುವುದರ ಕುರಿತು ತಿಳಿಸಿ ಒಳನಾಡು‌ ಮೀನು ಮತ್ತು ಮೀನಿನ ಉತ್ಪನ್ನಗಳಿಗೆ ವಿದೇಶದಲ್ಲಿ ಭಾರಿ‌ ಬೇಡಿಕೆ ಇದ್ದು ಈ ಬಗೆಯ ಉದ್ಯಮಕ್ಕೂ ವಿಫಲ ಅವಕಾಶವಿರುವುದನ್ನು ವಿವರಿಸಿ ತಿಳಿಸಿದರುಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರು ನಾ ಸೀತಾರಾಮ್ ಜೀ ಅವರು, ಹಾಗೂ ಭಾರತೀಯ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷರು ಅನಿಲ್ ಕುಮಾರ್ ,ಬಿಎಮ್ಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್,ಸುಳ್ಯ ಪ್ರಭಾರಿ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ ಕಲ್ಮಂಜ, ಜಿಲ್ಲಾ ಜೊತೆ ಕಾರ್ಯದರ್ಶಿ ಹಾಗೂ ಬೆಳ್ತಂಗಡಿ ತಾಲೂಕು ಸಂಯೋಜಕರಾದ ಸಾಂತಪ್ಪ ಕಲ್ಮಂಜ ,ನಗರ ಪಂಚಾಯತ್ ನ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ , ಸುಳ್ಯ ಕೃಷಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಇದರ ಅಧ್ಯಕ್ಷರಾದ ಬಾಲಗೋಪಾಲ ಸೇರ್ಕಜೆ , ಬಿಎಂಎಸ್ ನ ಮಾಜಿ ಜಿಲ್ಲಾಧ್ಯಕ್ಷರಾದ ಭಾಸ್ಕರ್ ರಾವ್ ಸುಳ್ಯ ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ಸುಳ್ಯ ಇದರ ಗೌರವ ಅಧ್ಯಕ್ಷರಾದ ಗೋಪಾಲ್ ಕೃಷ್ಣ ಭಟ್ ,ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ನಾರಾಯಣ ಅವರು ಸ್ವಾಗತಿಸಿ , ವಿಖ್ಯಾತ್ ಅವರು ನಿರೂಪಿಸಿದರು ಮಧುಸೂದನ್ ರವರು ಧನ್ಯವಾದಗಳನ್ನು ಅರ್ಪಿಸಿದರು ಕಾರ್ಯಕ್ರಮದಲ್ಲಿ ಸಂಘ ಪರಿವಾರದ ಪದಾಧಿಕಾರಿಗಳು ಕಾರ್ಯಕರ್ತರು ಗಣ್ಯ ವ್ಯಕ್ತಿಗಳು ಹಾಗೂ ಕಾರ್ಮಿಕ ಬಂಧುಗಳು ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಹಲವು ಸಂಘಟನೆಯ ಕಾರ್ಯಕರ್ತರು ಪದಾಧಿಕಾರಿಗಳು ಭಾಗವಹಿಸಿದರು.