ಸಂಪಾಜೆ : ಕಾಂಕ್ರೀಟ್ ರಸ್ತೆ ಉದ್ಘಾಟನೆ

0
1

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹಳ ವರ್ಷಗಳ ಬೇಡಿಕೆಯಾದ ಬಂಗ್ಲೆಗುಡ್ಡೆ ಕಾಂಕ್ರಿಟ್ ರಸ್ತೆಯ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಯಮುನಾ ಬಿ. ಎಸ್., ಜಗದೀಶ್ ರೈ ಸುಂದರಿ ಮುಂಡಡ್ಕ ಜಂಟಿಯಾಗಿ ರಿಬ್ಬನ್ ಕಟ್ ಮಾಡಿ ಉದ್ಘಾಟನೆ ಮಾಡಿದರು.


ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸದಸ್ಯರುಗಳಾದ ರಜನಿ ಶರತ್, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ವಿಜಯ ಕುಮಾರ್, ಬಾಳಂಬಿ ಪಂಚಾಯತ್ ಸದಸ್ಯರಾದ ರಮೇಶ್,ಮಾಜಿ ಸದಸ್ಯರುಗಳಾದ ತಾಜ್ ಮಹಮ್ಮದ್, ಲೂಕಸ್. ಟಿ. ಐ. ರಿಕ್ಷಾ ಚಾಲಕರ. ಮಾಲಕರ ಸಂಘದ ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ, ಸಂಜೀವಿನಿ ಒಕ್ಕೂಟದ ಕಾಂತಿ ಬಿ. ಎಸ್. ಪಂಚಾಯತ್ ಸಿಬ್ಬಂದಿ ಭರತ್, ಭೋಜಪ್ಪ. ಉಮೇಶ್ ಸ್ತ್ರೀ ಶಕ್ತಿ ಒಕ್ಕೂಟದ ಕಾರ್ಯದರ್ಶಿ ನೇತ್ರಾವತಿ ಬಂಗ್ಲೆಗುಡ್ಡೆ, ಖಾಲಿದ್ ಬಂಗ್ಲೆಗುಡ್ಡೆ, ಅನಿಲ್ ಸುಳ್ಯಕೋಡಿ, ಜಯರಾಮ್ ಬಂಗ್ಲೆಗುಡ್ಡೆ, ರೇಖಾವತಿ ಬಂಗ್ಲೆ ಗುಡ್ಡೆ ಹಾಗೂ ಬಂಗ್ಲೆಗುಡ್ಡೆ ನಿವಾಸಿಗಳು ಉಪಸ್ಥಿತರಿದ್ದರು. ರಜನಿ ಶರತ್ ವಂದಿಸಿದರು.

LEAVE A REPLY

Please enter your comment!
Please enter your name here