ಜಾಲ್ಸೂರು: ಸಿಡಿಲು ಬಡಿದು ಮನೆಗೆ ಹಾನಿ

0


ಸಿಡಿಲು ಬಡಿದು ಮನೆಗೆ ಹಾನಿ ಸಂಭವಿಸಿದ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ನ.24ರಂದು ಸಂಭವಿಸಿದೆ.

ಜಾಲ್ಸೂರು ಗ್ರಾಮದ ಕದಿಕಡ್ಕದ ಕೆ.ಎಂ. ಮೋನಪ್ಪ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಮನೆಯ ಅಡುಗೆ ಕೋಣೆಯೊಳಗೆ ಸ್ಲಾಪ್ ಬಿರುಕು ಬಿಟ್ಟಿದ್ದು, ನಾಲ್ಕು ಬಲ್ಬ್, ಸ್ವಿಚ್ ಬೋರ್ಡ್, ಸೇರಿದಂತೆ ವಿದ್ಯುತ್ ಕೇಬಲ್ ಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

ಮನೆಯ ಹೊರಾಂಗಣದಲ್ಲೂ ಗೋಡೆ ಬಿರುಕು ಬಿಟ್ಟಿರುವುದಾಗಿ ತಿಳಿದುಬಂದಿದೆ.