ಹಳೆಗೇಟು:ಅಮರ ಸುಳ್ಯ ರಮಣೀಯ ಸುಳ್ಯ ಅಂಗವಾಗಿ ಮುಂದುವರಿದ ಜನಜಾಗೃತಿ ಹಾಗೂ ಸ್ವಚ್ಛತಾ ಅಭಿಯಾನ

0

ಸುಳ್ಯ ನಗರ ಪರಿಸರದಲ್ಲಿ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಪ್ರತೀ ಗುರುವಾರ ದಂದು ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ‘ಅಮರ ಸುಳ್ಯ ರಮಣೀಯ ಸುಳ್ಯ ಜನಜಾಗೃತಿ ಹಾಗೂ ಶ್ರಮದಾನ ಸ್ವಚ್ಛತಾ ಅರಿವು ಮೂಡಿಸುವ ಕಾರ್ಯಕ್ರಮ ಇಂದು ಹಳೆಗೇಟು ಸಂತೃಪ್ತಿ ಹೋಟೆಲ್ ಪರಿಸರದಿಂದ ಆರಂಭಗೊಂಡು ಒಡಬಾಯಿ ವಿದ್ಯಾನಗರ ತಿರುವುನವರೆಗೆ ನಡೆಯಿತು.
ಇಂದು ವಿಶೇಷವಾಗಿ ಹಳೆ ಗೇಟು ಪೆಟ್ರೋಲ್ ಬಂಕ್ ಮುಂಭಾಗದ ತಿರುವಿನಲ್ಲಿ ರಸ್ತೆ ಬದಿಯಲ್ಲಿ ಆವರಿಸಿಕೊಂಡಿದ್ದ ಕಾಡು ಗಿಡಗಳು ಮತ್ತು ಬಳ್ಳಿಗಳನ್ನು ಕಡಿಯುವ ಮೂಲಕ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ರಸ್ತೆ ತಿರುವಿನಲ್ಲಿ ಸುಗಮವಾಗಿ ಸಂಚರಿಸಲು ವ್ಯವಸ್ಥೆಯನ್ನು ಮಾಡಲಾಯಿತು.


ಇಂದಿನ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ಮಾತನಾಡಿ ಪ್ರತಿಯೊಬ್ಬರು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಸ್ವಚ್ಛತೆಯನ್ನು ಬಹು ಮುಖ್ಯವಾಗಿ ತೆಗೆದುಕೊಳ್ಳಬೇಕಾಗಿದೆ. ಈ ರೀತಿಯ ಸಾಮೂಹಿಕವಾಗಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಜನಜಾಗೃತಿಗಾಗಿ, ಮತ್ತು ಸ್ವಚ್ಛ ಸುಳ್ಯದ ಕನಸನ್ನು ನನಸು ಮಾಡುವುದಾಗಿದೆ. ಆದ್ದರಿಂದ ಸುಳ್ಯದ ಪ್ರತಿಯೊಬ್ಬ ನಾಗರಿಕರು ತಮ್ಮ ತಮ್ಮ ಮನೆ ಅಥವಾ ಸಂಸ್ಥೆಗಳ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಆಗಿದ್ದಲ್ಲಿ ಮಾತ್ರ ಸ್ವಚ್ಛ ಸುಳ್ಯ ನಿರ್ಮಾಣ ಮಾಡಲು ಸಾಧ್ಯ. ಪ್ರತಿಯೊಬ್ಬರ ಮನಸ್ಸಿನಾಳದಿಂದಲೇ ಸ್ವಚ್ಛತೆ ಎಂಬುವುದು ಬರಬೇಕು. ಇತರರಿಂದ ಕೇಳಿ ಸ್ವಚ್ಛತೆಯ ಬಗ್ಗೆ ತಿಳಿದುಕೊಳ್ಳುವುದು ಒಬ್ಬ ಉತ್ತಮ ನಾಗರಿಕನ ಲಕ್ಷಣವಲ್ಲ ಎಂದು ಅವರು ಹೇಳಿದರು.


ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಮುಖ್ಯ ಅಧಿಕಾರಿ ಡಾ.ಸುಧಾಕರ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ನಗರ ಪಂಚಾಯತ್ ಸದಸ್ಯರುಗಳಾದ ಬುದ್ಧ ನ್ಯಾಕ್, ಸುಧಾಕರ ಕುರಂಜಿಗುಡ್ಡೆ, ನಾಮನಿರ್ದೇಶಕ ಸದಸ್ಯರುಗಳಾದ ರೋಹಿತ್ ಕೊಯಿಂಗೋಡಿ, ಬೂಡು ರಾಧಾಕೃಷ್ಣ ರೈ, ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು, ರೋ. ಪ್ರಭಾಕರ್ ನಾಯರ್, ವಿಲಿಯಂ ಲಸ್ರಾದೋ, ದಾಮೋದರ ಮಂಚಿ, ಲತಾ ದೇವಿಪ್ರಸಾದ್ ಕುತ್ಪಾಜೆ, ಉಪನ್ಯಾಸಕ ಸಂಜೀವ ಕುತ್ಪಾಜೆ, ದೇವಿಪ್ರಸಾದ್ ಕುತ್ಪಾಜೆ, ನಾರಾಯಣ ಪಿ ಆರ್ ಶಾಂತಿನಗರ, ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಮೊಗರ್ಪಣೆ ಹಳೆ ವಿದ್ಯಾರ್ಥಿ ಸಂಘದ ಮುಖಂಡರಾದ ಮುನೀರ್ ಸಿಲೋನ್, ಉಸ್ಮಾನ್ ಜಯನಗರ, ಅನೀಫ್ ಸಂಗಮ್, ರಾಜಸ್ಥಾನ್ ವಿಷ್ಣು ಸಂಘದ ಸುಳ್ಯ ಸಮಿತಿ ಪದಾಧಿಕಾರಿಗಳು, ಸುಳ್ಯ ವರ್ತಕರ ಸಂಘದ ಸದಸ್ಯರು, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷರು ರೂಪಾ ಶ್ರೀ ರೈ, ಪದಾಧಿಕಾರಿಗಳಾದ ದೀಪಕ್ ಕುತ್ತಮಟ್ಟೆ, ಜಯಂತ್ ರೈ,ಗಂಗಾಧರ ರೈ, ಮಲ್ಲಿಕಾರ್ಜುನ ಪ್ರಸಾದ್,ರೆಡ್ ಕ್ರಾಸ್ ಸದಸ್ಯರು, ಸುಳ್ಯ ರೋಟರಿ ಕ್ಲಬ್ ಪದಾಧಿಕಾರಿಗಳು, ಜಯನಗರ ಜೇನುಗೂಡು ತಂಡದ ಪದಾಧಿಕಾರಿಗಳು ಸದಸ್ಯರು, ಸುಳ್ಯ ರೆಡ್ ಕ್ರಾಸ್ ಸಮಿತಿ ಪದಾಧಿಕಾರಿಗಳು, ಕಾರ್ಮಿಕ ಸಂಘದ ಪದಾಧಿಕಾರಿಗಳು, ರೋಟ್ರಾಕ್ಟ್ ಸುಳ್ಯ ಸಿಟಿ, ರೋಟರಿ ಸಂಸ್ಥೆಸುಳ್ಯ, ನಗರ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಇನ್ನು ಹಲವಾರು ಸಂಘ ಸಂಸ್ಥೆಗಳ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಇಂದಿನ ಲಘು ಉಪಹಾರದ ವ್ಯವಸ್ಥೆಯನ್ನು ಕೊಡಿಯಾಲ ಬೈಲು ಕೀರ್ತನ್ ಕೆಟೆರರ್ಸ್ ಮಾಲಕ ಹರಿಪ್ರಸಾದ್ ರವರು ನೀಡಿ ಸಹಕರಿಸಿದರು.