ಐವರ್ನಾಡಿನಲ್ಲಿ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಗೆ ಸ್ವಾಮೀಜಿಗಳಿಂದ ಹಾರಾರ್ಪಣೆ

0

ಐವರ್ನಾಡಿನ ಕೊಪ್ಪತ್ತಡ್ಕ ಎಸ್.ಎನ್.ಮನ್ಮಥರವರ ಮನೆಯಲ್ಲಿ ಆದಿ ಚುಂಚನಗಿರಿ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಪಾದಪೂಜೆ ಸ್ವೀಕರಿಸಿ ,ಅನುಗ್ರಹ ಸಂದೇಶ ನೀಡಿ ತೆರಳುತ್ತಿರುವ ವೇಳೆ ಐವರ್ನಾಡಿನ ಮುಖ್ಯ ರಸ್ತೆ ಬಳಿ ಸ್ಥಾಪಿಸಿರುವ ಕೊಡುಗೈ ದಾನಿ ,ಐವರ್ನಾಡಿನ ಅಣ್ಣನೆಂದು ಪ್ರಸಿದ್ಧಿ ಪಡೆದಿರುವ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಗೆ ಹಾರಾರ್ಪಣೆ ಮಾಡಿದರು.


ಈ ಸಂದರ್ಭದಲ್ಲಿ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್ .ಮನ್ಮಥ, ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ರೇಣುಕಾಪ್ರಸಾದ್ ಕೆ.ವಿ, ಮೀನುಗಾರಿಕಾ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ,ದಿನೇಶ್ ಮಡ್ತಿಲ,ಚಂದ್ರಾ ಕೋಲ್ಚಾರ್,ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು,ಹರೀಶ್ ಕಂಜಿಪಿಲಿ, ಶಾಂತರಾಮ ಕಣಿಲೆಗುಂಡಿ,ಮಹೇಶ ಜಬಳೆ,ಶಿವರಾಮ ನೆಕ್ರೆಪ್ಪಾಡಿ,ಸಹಕಾರಿ ಸಂಘದ ನಿರ್ದೇಶಕರು ,ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.