ಅಖಿಲ ಭಾರತೀಯ ಅಧಿವಕ್ತಾ ಪರಿಷತ್ : ಕಾನೂನು ಕಾರ್ಯಾಗಾರ

0

ಅಖಿಲ ಭಾರತೀಯ ಅಧಿವಕ್ತಾ ಪರಿಷತ್ ಸುಳ್ಯ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಅಂಬಟೆಡ್ಕಸುಳ್ಯ ಇವರ ಸಹಯೋಗದೊಂದಿಗೆ ಡಿ.21ರಂದು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಅಂಬಟೆಡ್ಕಸುಳ್ಯ ದಲ್ಲಿ ಕಾನೂನು ಕಾರ್ಯಾಗಾರ ಕಾರ್ಯಕ್ರಮ ನಡೆಯಿತು.


ಯುವ ನ್ಯಾಯವಾದಿ ಅಶ್ವಿನ್ ಕುಮಾರ್ ಜನನ ಮರಣ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
,ಅಧಿವಕ್ತಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷ ರು ಮತ್ತು ಸುಳ್ಯ ವಕೀಲರ ಸಂಘದ ಕೋಶಾಧಿಕಾರಿ ಜಗದೀಶ್ ಡಿ ಪಿ ಅಧ್ಯಕ್ಷತೆ ವಹಿಸಿದ್ದರು ,ಹಿರಿಯ ನ್ಯಾಯವಾದಿ ಯು ಎಸ್ ರಾಮ್ ಮೋಹನ್ ರವರು ಮತ್ತು ನ್ಯಾಯವಾದಿ ಕುಮಾರಿ ಪಲ್ಲವಿ ಎಂ ಎ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ವಸತಿ ನಿಲಯದ ವಿದ್ಯಾರ್ಥಿ ಮಂಜುನಾಥ್ ಸ್ವಾಗತಿಸಿ, ವಸತಿ ನಿಲಯದ ವಿದ್ಯಾರ್ಥಿ ಕೆ ವಿ ಜಿ ಕಾನೂನು ಕಾಲೇಜಿನ ದರ್ಶನ್ ವಂದನಾರ್ಪಣೆ ಸಲ್ಲಿಸಿದರು. ನ್ಯಾಯವಾದಿ ಸಂದೀಪ್ ಮದುವೆ ಗದ್ದೆ ಕಾರ್ಯಕ್ರಮ ನಿರೂಪಿಸಿದರು.