ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್ ನಲ್ಲಿ “ಫ್ರೆಶ್ ಅಪ್ – ಬಿಲ್ಡ್ ಆಸ್ ಎ ಸ್ಮಾರ್ಟ್ ಟೀಚರ್” ಒಂದು ದಿನದ ಶಿಕ್ಷಕರಾಗಿ ಕಾರ್ಯಗಾರ

0

ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ಒಂದು ದಿನದ ಶಿಕ್ಷಕರ ಕಾರ್ಯಗಾರವು ಜೂನ್ 23 ರಂದು ನಡೆಯಿತು.

“ಫ್ರೆಶ್ ಅಪ್ – ಬಿಲ್ಡ್ ಆಸ್ ಎ ಸ್ಮಾರ್ಟ್ ಟೀಚರ್” ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಅಧ್ಯಕ್ಷರಾದ ಯು ಹೆಚ್ ಅಬೂಬಕರ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ತರಬೇತುದಾರರಾದ ಜೆಸಿ ರಾಜೇಂದ್ರ ಭಟ್ ಕೆ ಇವರ ಪರಿಚಯವನ್ನು ಶಿಕ್ಷಕಿ ಅಶ್ವಿನಿ ಇವರು ಮಾಡಿದರು.
ಶಿಕ್ಷಕಿಯರಿಗೆ ಕಮ್ಯುನಿಕೇಷನ್ ಸ್ಕಿಲ್ , ಟೀಚಿಂಗ್ ಮೆಥಡ್ ಹೀಗೆ ಹಲವಾರು ವಿಷಯಗಳಲ್ಲಿ ಚಟುವಟಿಕೆಗಳ ಮೂಲಕ ಶಿಕ್ಷಕರಿಗೆ ಒಂದುದಿನದ ತರಬೇತಿಯನ್ನು ನೀಡಿದರು. ಶಾಲಾ ಸಂಚಾಲಕರಾದ ಅಬ್ದುಲ್ ಖಾದರ್ ಹಾಜಿ ಬಯಂಬಾಡಿ ಶುಭ ಹಾರೈಸಿದರು, ಆಡಳಿತ ಸದಸ್ಯರಾದ ಶಾಫಿ ಕಲ್ಲೇರಿ , ಶಾಲಾ ಮುಖ್ಯೋಪಾಧ್ಯಾಯರಾದ ಸುನೈನಾ ಬಿ ಮತ್ತು ಎಲ್ಲಾ ಶಿಕ್ಷಕರು


ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ತರಬೇತಿದಾರರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.ಯು ಪಿ ಬಶೀರ್ ಸ್ವಾಗತಿಸಿ ವಂದಿಸಿದರು .ಆರಿಫ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.