ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಕಿರು ಷಷ್ಠಿ ಮಹೋತ್ಸವ, ಧಾರ್ಮಿಕ ಉಪನ್ಯಾಸ, ನಿವೃತ್ತ ನೌಕರರಿಗೆ ಸನ್ಮಾನ, ಧರ್ಮವೆಂದರೆ ಜೀವನ ಪದ್ಧತಿ: ಡಾ. ಬಿ.ವಿ. ವಸಂತಕುಮಾರ್

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಿರು ಷಷ್ಠಿ ಮಹೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮದ ಕೊನೆಯ ದಿನವಾದ ಇಂದು
ಧಾರ್ಮಿಕ ಉಪನ್ಯಾಸ, ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಮೈಸೂರು ಮಹಾರಾಣಿ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕ ಡಾ.ಬಿ.ವಿ ವಸಂತಕುಮಾರ್ ಧಾರ್ಮಿಕ ಉಪನ್ಯಾಸ ನೀಡಿ,
ಧರ್ಮ ಅಂದರೆ ವಿಮರ್ಶಿಸುವ ಪ್ರಜ್ಞೆ, ಅದೊಂದು ಜೀವನ ಪದ್ದತಿ. ಧರ್ಮವನ್ನು ಅನುಭವದ ಮೂಲಕ ಅನುಭವಿಸಬೇಕು. ಹೇಳಿದಂತೆ ಬದುಕುವುದು ಧರ್ಮವಾಗುತ್ತದೆ. ಅದರಂತೆ ನಡೆಯದಿದ್ದರೆ ಅದು ಅಧರ್ಮ. ಹಿಂದೂ ಧರ್ಮ ಮಾತ್ರ ಪ್ರಂಪಚದಲ್ಲಿ ಶಾಂತಿ ಬಯಸುತ್ತದೆ. ಪೂರ್ವಜರು ಕೃಷಿ ಮಾಡುವಾಗ ಭೂಮಿ ಪೂಜೆ ಮಾಡಿದರು. , ನೀರು ಸಿಗುವಾಗ ನದಿ ಪೂಜೆ ಮಾಡಿದರು‌. ಬೆಳೆ ತೆಗೆಯುವಾಗ ಪೂಜೆ ಮಾಡಿದರು‌ . ಇದೆಲ್ಲದವೂ ಧರ್ಮದ ಬುನಾದಿ.ಜಗತ್ತಿನಲ್ಲಿ ಹಲವು ನಾಗರಿಕತೆ ನಾಶವಾಗಿದೆ. ಆದರೆ ಭಾರತೀಯತೆ ನಾಶವಾಗಿಲ್ಲ. ಅದು ಭಾರತದಲ್ಲಿ ಧರ್ಮ ನಾಶ ಮಾಡಲು ಆಗಿಲ್ಲ. ನಮ್ಮ ಧರ್ಮದ, ಪ್ರೀತಿ, ಮನುಷ್ಯತ್ವ. ಜಗತ್ತಿನಲ್ಲಿ ಶಾಂತಿ ನೆಲೆಸಬೇಕು ಎಂದರೆ ಭಾರತವೊಂದೆ ಸಾಕು ಎಂದರಲ್ಲದೆ ಕುಕ್ಕೆ ಸುಬ್ರಹ್ಮಣ್ಯದಂತಹ ದೇಗುಲಗಳು ಧರ್ಮದ ಆತ್ಮ ಎಂದರು.


ಪುತ್ರಿ ಪ್ರಾಪ್ತಿ:
ನನಗೆ ಮದುವೆಯಾಗಿ 4 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ.ಆಗ ನನ್ನ ಅತ್ತೆಯ ಹೇಳಿಕೆಯಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪ್ರಾರ್ಥನೆ ಸಲ್ಲಿಸಿ ಆಶ್ಲೇಷ ಬಲಿ ಸೇವೆ ಸಲ್ಲಿಸಿ ಮಕ್ಕಳಾಗುವಂತೆ ಪ್ರಾರ್ಥಿಸಿದ್ದೇನು.ನಂತರದ ಎರಡು ವರ್ಷದಲ್ಲಿ ಶ್ರೀ ದೇವರ ಕೃಪೆಯಿಂದ ಮಗಳು ಜನಿಸಿದಳು.ಅವಳಿಗೆ ಬೆಳಕು ಎಂದು ಹೆಸರಿಟ್ಟೆ ಇದೀಗ ಆಕೆ ಬಿ.ಟೆಕ್ ಮಾಡುತ್ತಿದ್ದಾಳೆ.ಇದು ಕುಕ್ಕೆ ಸುಬ್ರಹ್ಮಣ್ಯ ನ ಮಹಿಮೆಯಾಗಿದೆ ಎಂದು ಡಾ.ಬಿ.ವಿ ವಸಂತಕುಮಾರ್ ಹೇಳಿದರು.

ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಆಗಮ ಪಂಡಿತರಾಸ ಡಾ. ರಾಜಗೋಪಾಲ, ವ್ಯವಸ್ಥಾಪನಾ ಸಮಿತ ಸದಸ್ಯರುಗಳಾದ ಪಿ ಜಿ ಎಸ್ ಎನ್ ಪ್ರಸಾದ್, ಪ್ರಸನ್ನ ದರ್ಬೆ, ಶ್ರೀವತ್ಸ, ಮನೋಹರ ರೈ, ಶೋಭಾ ಗಿರಿಧರ್, ವನಜಾ ಭಟ್, ಮಾಸ್ಟರ್‌ ಪ್ಲಾನ್ ಸದಸ್ಯ ಮನೋಜ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ನಿವೃತ್ತ ನೌಕರಾದ ಬಾಲಸುಬ್ರಹ್ಮಣ್ಯ ಭಟ್, ಪಿ.ಕೇದೀಶ್ವರನ್, ಶಾರದ ಎಸ್, ಅಕ್ಕು, ರಾಮಕ್ಕ, ವೀರಣ್ಣ, ಡಿ.ಚೆನ್ನಪ್ಪ, ಹುಡ್ಚವ್ವ, ದೇವಕಿ ಡಿ, ಲಕ್ಷ್ಮೀ ರಾಮಚಂದ್ರ ಇವರುಗಳನ್ನು ಗೌರವಿಸಲಾಯಿತು.
ಪಿ.ಜಿ.ಎಸ್.ಎನ್ ಪ್ರಸಾದ್ ಸ್ವಾಗತಿಸಿ, ಮನೋಜ್ ವಂದಿಸಿದರು. ರತ್ನಾಕರ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.