ಕೆ. ಎಸ್. ಗೌಡ ಪದವಿ ಪೂರ್ವ ಕಾಲೇಜಿಗೆ ತಂಡ ಪ್ರಶಸ್ತಿ

0

ಕುಕ್ಕೆ ಸುಬ್ರಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ ಇಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಡ್ರೀಮ್ಸ್ 2022 ರಲ್ಲಿ ನಿಂತಿಕಲ್ಲಿನ ಕೆ ಎಸ್ ಗೌಡ ಪದವಿ ಪೂರ್ವ ಕಾಲೇಜು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿದೆ.


ಲೋಗೋ ರಂಗೋಲಿ ಸ್ಪರ್ಧೆಯಲ್ಲಿ ಪ್ರಥ್ವಿ ಮತ್ತು ತ್ರಿಷಾ ಪ್ರಥಮ, ಫೊಟೋಗ್ರಫಿ ಯಲ್ಲಿ ಆಕಾಶ್ ಮತ್ತು ಯತೀಶ್ ಪ್ರಥಮ, ಮೋಕ್ ಪ್ರೆಸ್ ನಲ್ಲಿ ಅಬ್ದುಲ್ ರೆಹಮಾನ್ ಹಫೀಜ್ ದ್ವಿತೀಯ, ಪ್ರಾಡಕ್ಟ್ ಲಾಂಚ್ ನಲ್ಲಿ ರಿಫಾಷ್ ಶೇಖ್, ರಕ್ಷಿತ್, ಅನೀಸ್ ದ್ವಿತೀಯ, ಕ್ರಿಯೇಟಿವ್ ಇವೆಂಟ್ ನಲ್ಲಿ ಮಹರೂಫ್ ಮತ್ತು ಗಗನ್ ಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಉಪನ್ಯಾಸಕರಾದ ಜೀವನ್ ಎಸ್ ಎಚ್ ಮತ್ತು ಜಯಶ್ರೀ ಪಿ ವಿ ತಂಡದ ನೇತೃತ್ವ ವಹಿಸಿದ್ದರು. ಉಪನ್ಯಾಸಕ ವರ್ಗದವರು ಸಹಕರಿಸಿದರು. ಸಂಸ್ಥೆಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ ಎಸ್ , ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.