ಜ.07, 08 : ಕೊಳಂಬಳ ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ನೇಮೋತ್ಸವ

0

ಬೆಳ್ಳಾರೆ ಗ್ರಾಮದ ದೇವಿನಗರ -ಕೊಳಂಬಳ (ಉಮಿಕ್ಕಳ) ಶ್ರೀ ರಕ್ತೇಶ್ವರಿ ದೇವಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ರಕ್ತೇಶ್ವರಿ ದೇವಿ,ವರ್ಣಾರ ಪಂಜುರ್ಲಿ,ಕಲ್ಲುರ್ಟಿ,ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವವು ಜ.7 ಮತ್ತು ಜ.8 ರಂದು ನಡೆಯಲಿದೆ.
ಜ.6.ರಂದು ಸಂಜೆ ಗಂಟೆ 6.00 ಕ್ಕೆ ಸ್ವಸ್ತಿ ಪುಣ್ಯಾಹವಾಚನ,ರಾಕ್ಷೋಘ್ನ ಹೋಮ,ವಾಸ್ತು ಹೋಮ,ವಾಸ್ತುಪೂಜೆ,ದಿಕ್ಪಾಲಕ ಬಲಿ,ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.
ಜ.7 ರಂದು ಪ್ರಾತ:ಕಾಲ ಕಲಶಪೂಜೆ,ಗಣಪತಿ ಹೋಮ,ದುರ್ಗಾಪೂಜೆ, ಗಂಟೆ 9.00 ಗೊನೆ ಕಡಿಯಲಾಗುವುದು.
ಗಂಟೆ 1೦.೦೦ ಕ್ಕೆ ಆಶ್ಲೇಷ ಬಲಿ,ನಾಗತಂಬಿಲ, ಗಂಟೆ 11.06 ಪ್ರತಿಷ್ಠೆ, ಕಲಶಾಭಿಷೇಕ ನಡೆಯಲಿದೆ.
ಗಂಟೆ 12.00 ಕ್ಕೆ ರಕ್ತೇಶ್ವರಿ ದೇವಿಯ ತಂಬಿಲ,ಮಧ್ಯಾಹ್ನ 12.30 ಕ್ಕೆ ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 4.00 ಕ್ಕೆ ಭಂಡಾರ ತೆಗೆಯುವುದು.ರಾತ್ರಿ ಗಂಟೆ 6.00 ಕ್ಕೆ ಭಜನಾ ಕಾರ್ಯಕ್ರಮ ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಕೊಳಂಬಳ ,ಬೆಳ್ಳಾರೆ ಇವರಿಂದ , ರಾತ್ರಿ ಗಂಟೆ 7.00 ಕ್ಕೆ ರಕ್ತೇಶ್ವರಿ ದೇವಿಯ ನೇಮೋತ್ಸವ,8.30 ಕ್ಕೆ ಅನ್ನಸಂತರ್ಪಣೆ ,ರಾತ್ರಿ ಗಂಟೆ 11.00 ಕ್ಕೆ ವರ್ಣಾರ ಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಜ.8 ರಂದು ರಾತ್ರಿ ಗಂಟೆ 7.00 ಕ್ಕೆ ಕಲ್ಲುರ್ಟಿ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 8.30 ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 1೦.00 ಕ್ಕೆ ಕುಪ್ಪೆ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ದೈವಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದಿವಾಕರ ರೈ ಮರಿಕೇಯಿ ತಿಳಿಸಿದ್ದಾರೆ.