ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘ ರಚನೆ

0

ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು ಇದರ ೨೦೨೪ – ೨೫ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ರವ್ಯ ಎಂ.ಡಿ. ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಜೋಯ್ಸ್ ಟನ್ ಕ್ರಾಸ್ತಾ, ಕ್ರೀಡಾ ಕಾರ್ಯದರ್ಶಿಯಾಗಿ ಕೃತಿಕಾ ಜಿ ಬಾಳುಗೋಡು, ಜತೆ ಕಾರ್ಯದರ್ಶಿಯಾಗಿ ಮೊಹಮ್ಮದ್ ಇಶಾಮ್ ಜಿ., ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಚಂದನ ಪಿ.ಎ., ಜತೆ ಕಾರ್ಯದರ್ಶಿಯಾಗಿ ತನುಜ್ಞ ಸಿ.ಕೆ., ರೀಡರ್‍ಸ್ ಕ್ಲಬ್ ಕಾರ್ಯದರ್ಶಿಯಾಗಿ ದೀಕ್ಷಿತಾ ಟಿ.ಡಿ., ಜತೆ ಕಾರ್ಯದರ್ಶಿಯಾಗಿ ಹಿತಶ್ರೀ ಕೆ.ಎಂ., ಇಕೋ ಕ್ಲಬ್ ಕಾರ್ಯದರ್ಶಿ ಚೈತ್ರಾ ಜಿ.ಎ., ಜತೆ ಕಾರ್ಯದರ್ಶಿ ಕೃತಿಕಾ ಬಿ.ಎಚ್., ರೆಡ್ ಕ್ರಾಸ್ ಕ್ಲಬ್ ಕಾರ್ಯದರ್ಶಿ ಬಿಂದುಶ್ರೀ ಪಿ.ವಿ., ಜತೆ ಕಾರ್ಯದರ್ಶಿಯಾಗಿ ಫಾತಿಮತ್ ಶಂಕಲಾ ಆಯ್ಕೆಯಾದರು.