ಪಂಜ : ನಿವೇಶನ ಸೈಟ್ ಕಾಮಗಾರಿಗೆ ಚಾಲನೆ

0

ಪಂಜ ಗ್ರಾಮ ಪಂಚಾಯತ್ ವತಿಯಿಂದ ನಿವೇಶನ ರಹಿತರಿಗೆ
ಕುದ್ವದಲ್ಲಿ ನಿವೇಶನ ನಿರ್ಮಾಣದ ಸೈಟ್ ಕಾಮಗಾರಿಗೆ ಜ.6 ರಂದು
ಚಾಲನೆ ನೀಡಲಾಯಿತು.


ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ ದೀಪ ಬೆಳಗಿಸಿ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ
ನೇತ್ರವಾತಿ‌ ಕಲ್ಲಾಜೆ ತೆಂಗಿನ ಕಾಯಿ ಒಡೆದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ ಆರ್, ಗ್ರಾಮ ಪಂಚಾಯತ್ ಸದಸ್ಯರಾದ
ಶರತ್ ಕುದ್ವ ಲಿಖಿತ್ ಪಲ್ಲೋಡಿ
ಪ್ರಮೀಳ ಸಂಪ,ವಿಜಯಲಕ್ಷ್ಮಿ ಕಲ್ಕ, ಗ್ರಾಮ ಪಂಚಾಯತ್ ಪೂರ್ವಾಧ್ಯಕ್ಷ
ಕಾರ್ಯಪ್ಪ ಗೌಡ ಚಿದ್ಗಲ್,
ಕೇಶವ ಗೌಡ ಕುದ್ವ,ದುರ್ಗಪ್ರಸಾದ್ ಅಂಬೆಕಲ್ಲು,ತಾರನಾಥ ಬರೆಮೇಲು ಮೊದಲಾದವರು ಉಪಸ್ಥಿತರಿದ್ದರು.