ಜ.29 ರಂದು ಸುದ್ದಿ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖೆ ಉದ್ಘಾಟನೆ : ಆಮಂತ್ರಣ ಬಿಡುಗಡೆ

0

ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖೆ ಜ.29 ರಂದು ಶುಭಾರಂಭಗೊಳ್ಳಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಜ.9 ರಂದು ಸುಳ್ಯ ಸುದ್ದಿ ಕಚೇರಿಯಲ್ಲಿ ನಡೆಯಿತು.

ಸುದ್ದಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಡಾ.ಯು.ಪಿ.ಶಿವಾನಂದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದ್ದಿ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖಾ ಸಲಹಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.

ಸಹಕಾರ ಸಂಘದ ನಿರ್ದೇಶಕರು‌ ಹಾಗೂ ಕಾನೂನು ಸಲಹೆಗಾರರಾದ ಜಗನ್ನಿವಾಸ ರಾವ್, ಈಶ್ವರ ವಾರಣಾಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಂ ನರೇಂದ್ರ, ಸುಳ್ಯ ಶಾಖಾ ವ್ಯವಸ್ಥಾಪಕಾ ಚೇತನ್ ಬುಡ್ಲೆಗುತ್ತು ವೇದಿಕೆಯಲ್ಲಿದ್ದರು.

ಸಲಹಾ‌ ಸಮಿತಿ ಸದಸ್ಯರುಗಳಾದ ಸುಧಾಮ ಆಲೆಟ್ಟಿ, ದಿನೇಶ್ ಮಡ್ತಿಲ, ಜತ್ತಪ್ಪ ರೈ ಸುಳ್ಯ, ರೂಪಾ‌ ಜೆ ರೈ, ರೇಣುಕಾ ಸದಾನಂದ ‌ಜಾಕೆ, ಯಶ್ವಿತ್ ‌ಕಾಳಮ್ಮನೆ ಹಾಗೂ ಸುದ್ದಿ ಬಿಡುಗಡೆ ಸಂಸ್ಥೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿ ಸಹಕಾರ ಸಂಘದ ನಿರ್ದೇಶಕ ಹರೀಶ್ ಬಂಟ್ವಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.