ಜ. 14: ಬೆಳ್ಳಾರೆಯಲ್ಲಿ ಸ್ನೇಹ ಸಮ್ಮಿಲನ

0

1962 ರಿಂದ 1968 ವರೆಗಿನ ಬೆಳ್ಳಾರೆ ಶಾಲೆಯ ಸಹಪಾಠಿಗಳ ಸಮ್ಮಿಲನ, ಸನ್ಮಾನ ಕಾರ್ಯಕ್ರಮ ಜ. 14ರಂದು ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ವಿಶ್ರಾಂತ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪಿ.ಜಿ.ಎಸ್. ಎನ್. ಪ್ರಸಾದ್ ಮತ್ತು ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಮೊಕ್ತೇಸರರಾದ ಲಕ್ಷ್ಮೀನಾರಾಯಣ ಶ್ಯಾನುಭಾಗ್ ಭಾಗವಹಿಸಲಿದ್ದಾರೆ. ಬೆಳ್ಳಾರೆಯ ಹಿರಿಯ ವೈದ್ಯರಾದ ಡಾ. ಗೋಪಿನಾಥ ಪೆರುವಾಜೆ, ನಿವೃತ್ತ ಉಪನ್ಯಾಸಕ ರಾಮಕೃಷ್ಣ ಭಟ್ ಪೆಲತ್ತಡ್ಕ, ಮತ್ತು ದೇಶೀಯ ತಳಿ ಗೋಸಂರಕ್ಷಕ ವಿಶ್ವನಾಥ ಪೈ ಐವರ್ನಾಡುರವರಿಗೆ ಸನ್ಮಾನ ನಡೆಯಲಿದೆ. ಬೆಳಿಗ್ಗೆ 9.30 ಕ್ಕೆ ಉಪಹಾರದ ಬಳಿಕ ಸಭಾ ಕಾರ್ಯಕ್ರಮ, ಸನ್ಮಾನ, ಪುಸ್ತಕ ಬಿಡುಗಡೆ, ಪವಿತ್ರ ಗಂಗಾಜಲ ವಿತರಣೆ ಬಳಿಕ ಮಧ್ಯಾಹ್ನ 1.45 ಕ್ಕೆ ಸಹಭೋಜನ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರಾದ ಬಾಚೋಡಿ ವೆಂಕಟೇಶ ಪೈ ಕೊಡಿಯಾಲ ತಿಳಿಸಿದ್ದಾರೆ.