ಸುಳ್ಯದಲ್ಲಿ ಸ್ವಾಮಿ ವಿವೇಕಾನಂದ ಸರ್ಕಲ್ ನಲ್ಲಿ ಪ್ರತಿಮೆಗೆ ಹಾರಾರ್ಪಣೆ – ಯುವ ದಿನಾಚರಣೆ, ವಿವೇಕಾನಂದರ ಜೀವನವೇ ಸ್ಫೂರ್ತಿ : ಪ್ರವೀಣ್ ಶೆಟ್ಟಿ

0

ವಿವೇಕಾನಂದ ಪ್ರತಿಮೆ ನಿರ್ಮಾಣ ಸಮಿತಿ ಆಶ್ರಯದಲ್ಲಿಸುಳ್ಯದ ವಿವೇಕಾನಂದ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ಗೆ ಹಾರಾರ್ಪಣೆ ಕಾರ್ಯಕ್ರಮ ಜ.12 ರಂದು ನಡೆಯಿತು.

ಸುಳ್ಯದ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿಯವರು ವಿವೇಕಾನಂದರ ಪ್ರತಿಮೆಗೆ ಹಾರಾರ್ಪಣೆಗೈದರು. ಬಳಿಕ‌ ಮಾತನಾಡಿದ ಅವರು “ಸ್ವಾಮಿ ವಿವೇಕಾನಂದರು ಬದುಕಿದ ದಿನಗಳು ಕಡಿಮೆಯಾದರೂ ಅವರ ಜೀವನ ವೃತ್ತಾಂತ ಎಲ್ಲರಿಗೂ ಸ್ಪೂರ್ತಿ. ಯುವಕರು ಸ್ವಾಮಿ ವಿವೇಕಾನಂದರ ಬದುಕನ್ನು ತಿಳಿದು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದವರು ಹೇಳಿದರು.

ಅರಂತೋಡು ಎನ್ನೆಂಪಿಯುಸಿ ಉಪನ್ಯಾಸಕ ಪದ್ಮಕುಮಾರ್ ಗುಂಡಡ್ಕ ಉಪನ್ಯಾಸ ನೀಡಿದರುಮುಖ್ಯ ಅತಿಥಿಯಾಗಿ ನ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಕುರುಂಜಿ, ಸದಸ್ಯೆ ಕಿಶೋರಿ ಶೇಟ್, ನ್ಯಾಯವಾದಿ ಜಗದೀಶ್ ಡಿ.ಪಿ. ಭಾಗವಹಿಸಿದ್ದರು.

ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಸುಳ್ಯದ ಉದ್ಯಮಿಗಳಾದ ಎಂ.ಬಿ.ಸದಾಶಿವ, ನವೀನ್ ರೈ‌ ಮೇನಾಲ, ಸುಭೋದ್ ಶೆಟ್ಟಿ ಮೇನಾಲ, ನ್ಯಾಯವಾದಿ ಸಂದೀಪ್ ವಳಲಂಬೆ, ಸಮಿತಿಯ ಕೋಶಾಧಿಕಾರಿ ಹೇಮಂತ್ ಕಾಮತ್ ಮೊದಲಾದವರಿದ್ದರು.ಪ್ರತಿಮೆ ನಿರ್ಮಾಣ ಸಮಿತಿ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮೇನಾಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕುಲದೀಪ್ ಪೆಲತಡ್ಕ ವಂದಿಸಿದರು.