ಎಲಿಮಲೆ ಸತ್ವಮ್ ಚಿಕಿತ್ಸಾಲಯ ಶುಭಾರಂಭ

0

ಎಲಿಮಲೆಯ ಹೊನ್ನಾಡಿ ಕಾಂಪ್ಲೆಕ್ಸ್ ನಲ್ಲಿ ಸತ್ವಂ ಚಿಕಿತ್ಸಾಲಯ ಜ. 11 ರಂದು ಶುಭಾರಂಭಗೊಂಡಿತು.
ಸುಳ್ಯ ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ನೆಲ್ಲೂರು ಕೆಮ್ರಾಜೆ ಗ್ರಾ. ಪಂ. ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ, ಗುತ್ತಿಗಾರು ಮಾಜಿ ಮಂಡಲ ಪ್ರಧಾನ ಮುಳಿಯ ತಿಮ್ಮಪ್ಪಯ್ಯ, ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮೂಲೆ ತೋಟ ವಿಷ್ಣುಭಟ್ ದೀಪ ಬೆಳಗಿಸಿ, ಉದ್ಘಾಟಿಸಿ, ಶುಭ ಹಾರೈಸಿದರು.


ಡಾ ನಂದಕುಮಾರ್ ಮಾತನಾಡಿ ಕೋವಿಡ್ ನಂತರ ಜನರು ಬಹಳ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು ಅದಕ್ಕೆ ಯೋಗ್ಯ ಚಿಕಿತ್ಸೆ ದೊರಕಲಿ ಹಾಗೂ ಜನರು ಇದರ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.
ಸತ್ವಮ್ ಚಿಕಿತ್ಸಾಲಯದ ವೈದ್ಯರಾದ ಡಾ. ಮಹೇಶ್ ಕೆ. ಎಸ್. ಚಿಕಿತ್ಸಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.