ತನುಷ್ ಹಿರಿಯಡ್ಕ ಇವರು ಸಿ.ಎ. ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಉತ್ತೀರ್ಣ

0

2022ನೇ ನವೆಂಬರ್ ತಿಂಗಳಿನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯೇಟ್ ಗ್ರೂಪ್-1 ಪರೀಕ್ಷೆಯಲ್ಲಿ ತನುಷ್ ಇವರು ಉತ್ತೀರ್ಣರಾಗಿರುತ್ತಾರೆ.‌

ಸುಳ್ಯ ತಾಲೂಕು ಅಮರಮುಡ್ನೂರು ಗ್ರಾಮದ ಸುದರ್ಶನ್ ಹಿರಿಯಡ್ಕ ಮತ್ತು ಲಲಿತಾ. ಬಿ ದಂಪತಿಗಳ ಪುತ್ರರಾಗಿರುವ ತನುಷ್ ಹಿರಿಯಡ್ಕ ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕೆ. ಎಸ್. ಗೌಡ ಆಂಗ್ಲ ಮಾಧ್ಯಮ ಶಾಲೆ, ವರ್ಷನಗರ ನಿಂತಿಕಲ್ಲಿನಲ್ಲಿ, ಪಿಯುಸಿ ವಿದ್ಯಾಭ್ಯಾಸವನ್ನು ನರೇಂದ್ರ ಪಿ.ಯು ಕಾಲೇಜು, ಪುತ್ತೂರಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ಮಂಗಳೂರು ಇಲ್ಲಿ ಪಡೆದಿರುತ್ತಾರೆ.