ಮಾ.03 : ಕೊಯಿಲ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ

0

ಐವರ್ನಾಡು ಗ್ರಾಮದ ಕೊಯಿಲ ಮಹಾಮ್ಮಾಯಿ ದೇವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ ಮಾ.03 ರಂದು ನಡೆಯಲಿದೆ.
ಫೆ.23 ರಂದು ಗೊನೆ ಕಡಿಯಲಾಯಿತು.
ಮಾ.01 ರಂದು ಕಲಶ ಸ್ನಾನ, ಭಂಡಾರ ಶುದ್ದೀಕರಣ ನಡೆಯಲಿರುವುದು.
ಮಾ.02 ರಂದು ರಾತ್ರಿ ಗಂಟೆ 9.00 ಕ್ಕೆ ಹರಕೆ ಒಪ್ಪಿಸುವುದು.ಪೂಜಾ ಸ್ಥಳ ಶುದ್ದೀಕರಣ, ಪೂಜಾ ಸ್ಥಳಕ್ಕೆ ಭಂಡಾರ ಹೊರಡುವುದು,ಅಮ್ಮನವರಿಗೆ ಪೂಜಾ ಗುಂಡ ಒಪ್ಪಿಸುವುದು ನಡೆಯಲಿದೆ.
ರಾತ್ರಿ ಗಂಟೆ 12.00 ರ ನಂತರ ದೇವದೂತರಿಗೆ ಬಲಿ ಕೊಡುವುದು.
ಮಾ.03 ರಂದು ಮಧ್ಯಾಹ್ನ ಗಂಟೆ 12.00 ಕ್ಕೆ ಶ್ರೀ ಮಹಾಮ್ಮಾಯಿ ಅಮ್ಮನವರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.