ಸೈಂಟ್ ಜೋಸೆಫ್ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ

0


ಫೆಬ್ರವರಿ 28ರಂದು ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಿತು. ವಿದ್ಯಾರ್ಥಿಗಳು ವೈವಿಧ್ಯಮಯ ವಿಜ್ಞಾನ ಮಾದರಿಗಳನ್ನು ರಚಿಸಿದರು. ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜಾ, ವಿದ್ಯಾರ್ಥಿಗಳು, ಶಿಕ್ಷಕರುಗಳು , ಸೈಂಟ್ ಬ್ರಿಜಿಡ್ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿಜ್ಞಾನ ಮಾದರಿಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಜ್ಞಾನ ದಿನಾಚರಣೆಯ ವಿಶೇಷತೆಯ ಬಗ್ಗೆ 7 ನೇ ತರಗತಿಯ ದಿಯಾ ಮಾತನಾಡಿದರು .

ವಿಜ್ಞಾನ ರಸಪ್ರಶ್ನೆ ಹಾಗೂ ವಿಜ್ಞಾನ ಮಾದರಿಯ ಸ್ಪರ್ಧಾ ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮ ರವರು ಬಹುಮಾನ ವಿತರಿಸಿದರು. ವಿಜ್ಞಾನ ಶಿಕ್ಷಕಿಯರಾದ ಸವಿತಾ, ಕಲಾವತಿ, ಶ್ರೀಧನ್ಯ, ಭವ್ಯ ಸಹಕರಿಸಿದರು.