ಚೊಕ್ಕಾಡಿ:ಅಜ್ಜನಗದ್ದೆ ತಿರುವಿನಲ್ಲಿ ಕೆ.ಎಸ್.ಆರ್‌.ಟಿ .ಸಿಬಸ್ ಗೆ ಬೈಕ್ ಡಿಕ್ಕಿ- ಸವಾರ ಗಂಭೀರ

0

ಚೊಕ್ಕಾಡಿ ಕಡೆಯಿಂದ ಕುಕ್ಕುಜಡ್ಕದ ಕಡೆಗೆ ಬರುತ್ತಿದ್ದ ಕೆ.ಎಸ್‌.ಆರ್‌.ಟಿ.ಸಿ ಬಸ್ ಗೆ ಕುಕ್ಕುಜಡ್ಕದಿಂದ ಚೊಕ್ಕಾಡಿ ಕಡೆಗೆ ಸಂಚರಿಸುತ್ತಿದ್ದ ಪಲ್ಸರ್ ಬೈಕ್ ಅಜ್ಜನಗದ್ದೆಯ ಬಳಿ ಡಿಕ್ಕಿ ಹೊಡೆದ ಘಟನೆ ವರದಿಯಾಗಿದೆ.

ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ರಸ್ತೆಯ ಮೇಲೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಗಾಯಗೊಂಡ ಬೈಕ್ ಸವಾರರನ್ನು ತಕ್ಷಣ ಸ್ಥಳೀಯರು ಕಾರಿನಲ್ಲಿ ಸುಳ್ಯ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿ ತಿಳಿದು ಬಂದಿದೆ. ಬೈಕ್ ಸವಾರ ನಾರ್ಣಕಜೆಯ ಯುವಕ ಎಂದು ತಿಳಿದು ಬಂದಿದೆ.